ಬಂದಿದೆ ಸಮುದ್ರ ನೀರಿನಿಂದ ಬೆಳಗುವ ದೀಪ!

ಉಪ್ಪು ನೀರಿನಿಂದ ಕಾರ್ಯ ನಿರ್ವಹಿಸುವ ಸಾಲ್ಟ್‌ಲೈಟ್‌ ಬಡವರ ಪಾಲಿಗೆ ಆಶಾಕಿರಣ

ಹೊಸದಿಲ್ಲಿ: ಸಮುದ್ರ ಉಪ್ಪು ನೀರನ್ನು ಬಳಸಿ ದೀಪ ಬೆಳಗಿಸಬಹುದೇ? ಇದು ಸಾಧ್ಯ ಎಂದು ತೋರಿಸಿದ್ದಾರೆ ಭಾರತೀಯ ವಿಜ್ಞಾನಿಗಳು. ಲವಣಯುಕ್ತ ನೀರಿನ ಲ್ಯಾಂಟರ್ನ್‌ (Saline Water lantern) ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಇಂದು ಬಿಡುಗಡೆ ಮಾಡಿದ್ದಾರೆ. ಚೆನ್ನೈನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಶಿಯನ್‌ ಟೆಕ್ನಾಲಜಿ (ಎನ್‌ಇಒಟಿ) ತಂಡ ರೋಶಿನಿ ಹೆಸರಿನ ಈ ದೀಪವನ್ನು ಅಭಿವೃದ್ಧಿಪಡಿಸಿದೆ.
ಈ ಲವಣಯುಕ್ತ ನೀರಿನಿಂದ ಬೆಳಗುವ ಈ ಎಲ್‌ಇಡಿ ದೀಪವನ್ನು ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ.
ಭಾರತದ 7500 ಕಿಲೋಮೀಟರ್‌ ವ್ಯಾಪ್ತಿಯ ಕರಾವಳಿ ಬೆಲ್ಟ್‌ನಲ್ಲಿರುವ ಮೀನುಗಾರಿಕಾ ಸಮುದಾಯಕ್ಕೆ ಮತ್ತು ಬಡವರ ಬದುಕನ್ನು ಸುಲಭಗೊಳಿಸಲು ಮತ್ತು ಅವರ ಮನೆಗಳನ್ನು ಬೆಳಗಲು ಈ ಸಲೈನ್‌ ವಾಟರ್‌ ಲ್ಯಾಟರ್ನ್‌ ನೆರವಾಗಲಿದೆ ಎನ್ನಲಾಗಿದೆ.
ಈ ಲ್ಯಾಟರ್ನ್‌ ಅನ್ನು ಸಮುದ್ರದ ನೀರಿನ ಲಭ್ಯತೆ ಇಲ್ಲದ ಕಡೆಯೂ ಬಳಸಬಹುದು. ಲವಣಯುಕ್ತ ನೀರು ಅಥವಾ ಸಾಮಾನ್ಯ ನೀರಿಗೆ ಸಾಮಾನ್ಯ ಉಪ್ಪು ಮಿಶ್ರ ಮಾಡಿ ಬಳಸಬಹುದು. ಇದು ಕಡಿಮೆ ವೆಚ್ಚದಾಯಕ.
ಸಾಲ್ಟ್‌ ಲೈಟ್‌ ಹೇಗೆ ಕೆಲಸ ಮಾಡುತ್ತದೆ?
ಈ ರೀತಿಯ ತಂತ್ರಜ್ಞಾನವನ್ನು ಈ ಹಿಂದೆ ಅಮೆರಿಕದ ಕಂಪನಿಯೊಂದು ಪರಿಚಯಿಸಿತ್ತು. ಕೊಲಂಬಿಯಾದ ರಿನೀವಬಲ್‌ ಎನರ್ಜಿ ಸ್ಟಾರ್ಟಪ್‌ ಇ-ದಿನಾ ಮತ್ತು ಡಬ್ಲ್ಯುಪಿಪಿ ವಂಡರ್‌ಮೆನ್‌ ಥಾಮ್ಸನ್‌ ಕೊಲಂಬಿಯಾ ವಿಭಾಗ ಉಪ್ಪು ನೀರನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಸಾಧನವನ್ನು ಅಭಿವೃದ್ಧಿಪಡಿಸಿತ್ತಈ ಸ್ಟಾರ್ಟಪ್‌ ಅಭಿವೃದ್ಧಿಪಡಿಸಿದ ವಾಟರ್‌ ಲೈಟ್‌ ಕೂಡ ಇದೀಗ ಭಾರತ ಅಭಿವೃದ್ಧಿಪಡಿಸಿದ ಲ್ಯಾಂಟರ್ನ್‌ ಅನ್ನು ಹೋಲುತ್ತದೆ. ಅರ್ಧ ಲೀಟರ್‌ ಉಪ್ಪು ನೀರಲ್ಲಿ 45 ದಿನ ಲೈಟ್‌ ಉರಿಯುತ್ತದೆ ಎಂದು ವಂಡರ್‌ಮೆನ್‌ ಥಾಪ್ಸನ್‌ ಮಾಹಿತಿ ನೀಡಿತ್ತು.
ವಾಟರ್‌ಲೈಟ್‌ ಅಯಾನೀಕರಣದ ಮೂಲಕ ಕಾರ್ಯನಿರ್ಹಿಸುತ್ತದೆ. ಉಪ್ಪು ನೀರಿನ ಎಲೆಕ್ಟ್ರೋಲೈಟ್‌ಗಳು ವಾಟರ್‌ಲೈಟ್‌ ಸಾಧನದೊಳಗಿರುವ ಮ್ಯಾಗ್ನೇಶಿಯಂ ಜತೆ ಪ್ರತಿಕ್ರಿಯಿಸಿ ಬೆಳಕು ಉತ್ಪಾದಿಸುತ್ತದೆ. ಮೋನುಗಾರರಿಗೆ, ಹಡಗುಗಳಿಗೆ ಈ ದೀಪ ಬಹಳ ಪ್ರಯೋಜನಕಾರಿ ಎನ್ನಲಾಗಿದೆ. ದೀಪವನ್ನು ಇನ್ನಷ್ಟು ಸುಧಾರಣೆ ಮಾಡುವ ಪ್ರಯೋಗಗಳು ನಡೆಯುತ್ತಿವೆ.

















































































error: Content is protected !!
Scroll to Top