ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಂಗಳವಾರ ಸಂಸತ್ತಿನಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದರು. ಸಂಘ ಪರಿವಾರದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿರುವುದಕ್ಕೆ ಈ ವೇಳೆ ಶೋಭಾ ಅಮಿತ್‌ ಶಾ ಅವರಿಗೆ ಧನ್ಯವಾದ ತಿಳಿಸಿದರು. ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕ್ರಮ ಸೂಕ್ತ ಕೈಗೊಳ್ಳುವಂತೆಯೂ ಇದೇ ವೇಳೆ ಶೋಭಾ ಮನವಿ ಮಾಡಿಕೊಂಡರು.

ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ ಸಚಿವೆ ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಕರ್ನಾಟಕದಲ್ಲಿ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋರ ಅಪರಾಧಗಳನ್ನು ಮಾಡಲು ಕೇರಳದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಮಂಗಳೂರಿನಂತಹ ಪ್ರದೇಶಗಳಿಗೆ ಹೇಗೆ ಪ್ರವೇಶಿಸುತ್ತಾ ಇವೆ ಹಾಗೂ ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಯಲು ಮತ್ತು ಮಂಗಳೂರಿನಲ್ಲಿ ತ್ವರಿತ ತನಿಖೆಯ ಬಗ್ಗೆ ನಿಗಾ ವಹಿಸಲು ಬೆಂಗಳೂರಿನಲ್ಲಿರುವ ಎನ್‌ಐಎ ಕಚೇರಿಯನ್ನು ಹೆಚ್ಚಿಸಲು ಅವರು ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಮಂಗಳೂರು, ಕೇರಳಕ್ಕೆ ಹತ್ತಿರವಾಗಿರುವುದರಿಂದ ಇಸ್ಲಾಮಿಗಳ ಫಲವತ್ತಾದ ನೆಲವಾಗಿ ಮಾರ್ಪಡುತ್ತಿದೆ. ಈ ಹಿಂದೆ ಭದ್ರತಾ ಏಜೆನ್ಸಿಗಳು ಮಂಗಳೂರಿನಿಂದ ಕಾರ್ಯನಿರ್ವಹಿಸುವ ಮಾಡ್ಯೂಲ್‌ಗಳನ್ನು ಬಿಚ್ಚಿಟ್ಟಿದ್ದವು. ಬೆಂಗಳೂರಿನಲ್ಲಿ ಎನ್‌ಐಎ ಕಚೇರಿಯನ್ನು ಹೆಚ್ಚಿಸುವುದರಿಂದ ಮಂಗಳೂರಿನಲ್ಲಿ ಜಿಹಾದಿಗಳನ್ನು ಮಟ್ಟ ಹಾಕಲು ಸಹಕಾರಿಯಾಗುತ್ತದೆ ಎಂದರು.



































































































error: Content is protected !!
Scroll to Top