ಕುಂದಾಪುರ: ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ಸಮುದ್ರಕ್ಕೆ ಬಿದ್ದು ಓರ್ವ ಸಾವಿಗೀಡಾಗಿ ಇನ್ನೊಬ್ಬ ನಾಪತ್ತೆಯಾಗಿರುವ ಘಟನೆ ಶನಿವಾರ ತಡರಾತ್ರಿ ಮರವಂತೆ ಬೀಚ್ನಲ್ಲಿ ಸಂಭವಿಸಿದೆ.
ಕಾರಿನಲ್ಲಿ ನಾಲ್ವರಿದ್ದು, ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಬ್ಬ ಸಮುದ್ರದ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮರವಂತೆಯ ಮಾರಸ್ವಾಮಿ ದೆವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ನಾಲ್ಕು ಮಂದಿಯಿದ್ದರು. ಈ ಪೈಕಿ ಇಬ್ಬರು ಪಾರಾಗಿದ್ದಾರೆ. ಕುಂದಾಪುರ ಕೋಟೇಶ್ವರದಿಂದ ಬೈಂದೂರು ಕಡೆ ಕಾರು ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಕಾರನ್ನು ಸಮುದ್ರದಿಂದ ಮೇಲೆತ್ತಿದ್ದಾರೆ.
