ಬೆಂಗಳೂರು : ಥಾಮಸ್ ಮತ್ತು ಉಬರ್ ಕಪ್ ಟೂರ್ನಿಯ 73 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಫೈನಲ್ ತಲುಪಿರಲಿಲ್ಲ. ಇದೀಗ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ 14 ಬಾರಿಯ ಚ್ಯಾಂಪಿಯನ್ ಇಂಡೋನೇಷ್ಯಾ ತಂಡವನ್ನು ಬಗ್ಗುಬಡಿದು ದಾಖಲೆ ನಿರ್ಮಿಸಿದೆ. ಈ ಮೂಲಕ ಚೀನಾ, ಜಪಾನ್, ಡೆನ್ಮಾರ್ಕ್ ಮತ್ತು ಇಂಡೋನೇಶ್ಯಾದ ನಂತರ ಭಾರತವು ಥಾಮಸ್ ಕಪ್ ಗೆದ್ದ 6ನೇ ರಾಷ್ಟ್ರವಾಗಿದೆ.
ಗೆಲುವು ದಾಖಲಿಸಿದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ರೂ. 1 ಕೋಟಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಬ್ಯಾಡ್ಮಿಂಟನ್ ಆಟಗಾರರಿಗೆ ರಾಜ್ಯ ಸರಕಾರವು ರೂ.5 ಲಕ್ಷ ಬಹುಮಾನವನ್ನು ಘೋಷಿಸಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಿನಿ ಒಲಿಂಪಿಕ್ಸ್ ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ತಂಡಕ್ಕೆ ಶುಭಹಾರೈಸಿ ಬಹುಮಾನದ ಘೋಷಣೆಯನ್ನು ಮಾಡಿದರು.








































