ಕಾರ್ಕಳ : ತಾಲೂಕಿನಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣ ಜಾಸ್ತಿಯಾಗುತ್ತಿರುವುದರಿಂದ ಮೇ 17ರಂದು ಕಾರ್ಕಳ ನಗರ ಠಾಣೆ ಪೊಲೀಸರು ಜೋಡುರಸ್ತೆಯಲ್ಲಿ ವಾಹನಗಳ ತಪಾಸಣೆ, ದಾಖಲೆ ಪರಿಶೀಲನೆ ನಡೆಸಿದರು. ಕಾರ್ಕಳ ನಗರ ಪೊಲೀಸ್ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್., ಎಎಸ್‌ಐ ರಾಜೇಶ್, ಯಶವಂತ್, ದಿನಕರ್, ಗಿರೀಶ್, ಯತೀಶ್ ಅವರು ವಾಹನ ಚಾಲಕರು, ದ್ವಿಚಕ್ರ ಸವಾರನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿದರು.









































