ಹೆಬ್ರಿ : ಮನೆಯಂಗಳದಲ್ಲಿ ಕುಸಿದು ಬಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕು ನೆಹರುನಗರ ಹುತ್ತುರ್ಕೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ಬಂಗಾರುಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯ ಶೆಟ್ಟಿ (57) ಮೃತಪಟ್ಟವರು. ವಿಜಯ ಶೆಟ್ಟಿ ಅವರು ಅಂಗಳದಲ್ಲಿ ಕುಸಿದು ಬಿದ್ದ ತಕ್ಷಣವೇ ಹೆಬ್ರಿಯ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಈ ವೇಳೆಗಾಗಲೇ ವಿಜಯ ಶೆಟ್ಟಿ ಅವರು ಮೃತಪಟ್ಟಿರುತ್ತಾರೆ. ಮೃತರ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಶಿಕ್ಷಕರ ಸಂಘದ ಸದಸ್ಯರು ಭೇಟಿ ನೀಡಿ ಮನೆ ಸಾಂತ್ವನ ಹೇಳಿದರು.
ಹೆಬ್ರಿ : ಹೃದಯಾಘಾತದಿಂದ ಶಿಕ್ಷಕ ಸಾವು








































