ಊಟ ಕೇಳಿದ ವಿಚಾರಕ್ಕೆ ಮಗನಿಂದ ತಾಯಿಗೆ ಹಲ್ಲೆ

ಕಾರ್ಕಳ : ಊಟ ಕೇಳಿದ ವಿಚಾರಕ್ಕೆ ಸಿಟ್ಟಿಗೆದ್ದ ಮಗ ತಾಯಿಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿಯಿಂದ ವರದಿಯಾಗಿದೆ. ಜೂ. 2ರಂದು ಯಶೋಧಾ (83) ಅವರು ತನ್ನ ಮಗ ದಾಮೋದರ ಆಚಾರ್ಯನಲ್ಲಿ ಊಟ ಕೇಳಿದ್ದು, ಅದರಿಂದ ಕೋಪಗೊಂಡ ಮಗ ತೆಂಗಿನ ಮರದ ಹೆಡೆಯಿಂದ ತಾಯಿಯ ತಲೆಯ ಹಿಂಬಾಗಕ್ಕೆ ಹೊಡೆದಿರುತ್ತಾನೆ. ದಾಮೋದರ ಅವನು ನಿತ್ಯ ತಾಯಿಗೆ ಬೈಯುತ್ತ ಹೊಡೆಯುತ್ತ ಇದ್ದನು ಎನ್ನಲಾಗುತ್ತಿದೆ. ಯಶೋಧಾ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































































error: Content is protected !!
Scroll to Top