ಸಹಾಯಕ ಕೃಷಿ ನಿರ್ದೇಶಕ ಜಯರಾಜ್‌ ಪ್ರಕಾಶ್ ಸೇವಾ ನಿವೃತ್ತಿ‌

ಕಾರ್ಕಳ : ಕಾರ್ಕಳ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿದ್ದ ಜಯರಾಜ್‌ ಪ್ರಕಾಶ್‌ ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದರು. ಮೂಲತಃ ಮಂಗಳೂರಿನ ಜಯರಾಜ್‌ ಅವರು ಕಳೆದ 38 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆ ಅಲಂಕರಿಸಿದ್ದರು. ಉಡುಪಿ, ಕೊಕ್ಕರ್ಣೆ, ಹೆಬ್ರಿ, ಸುಳ್ಯ ಮೊದಲಾದೆಡೆ ಸಹಾಯಕ ಕೃಷಿ ಅಧಿಕಾರಿಯಾಗಿ, ಮಂಗಳೂರು, ಮೂಡಬಿದ್ರಿಯಲ್ಲಿ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಟಿಡಬ್ಲ್ಯೂಡಿಓ ಆಗಿ ಕರ್ತವ್ಯ ಸಲ್ಲಿಸಿದ್ದ ಜಯರಾಜ್‌‌ 2017ರಲ್ಲಿ ಕಾರ್ಕಳ ವರ್ಗಾವಣೆಗೊಂಡು ಸಹಾಯ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜೇಸಿಸ್‌, ಲಯನ್ಸ್‌, ಜಯಂಟ್ಸ್‌ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಜಯರಾಜ್‌ ಅವರು ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.

















































































error: Content is protected !!
Scroll to Top