ಬೆಳ್ಮಣ್‌ : ಸೊಸೈಟಿಯಿಂದ ನೀಡಲಾದ ಬೆಳ್ತಿಗೆಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಪತ್ತೆ

ಕಾರ್ಕಳ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಣೆಯಾದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಪತ್ತೆಯಾದ ಕುರಿತು ಕಾರ್ಕಳ ತಾಲೂಕು ಬೆಳ್ಮಣ್‌ ನಿಂದ ವರದಿಯಾಗಿದೆ. ಬೆಳ್ಮಣ್‌ ಸೊಸೈಟಿಯಿಂದ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ದೊರೆತಿದ್ದು, ಪಡಿತರ ಅಕ್ಕಿಯಲ್ಲಿ ಕಲಬೆರಕೆ ಬಗ್ಗೆ ಗ್ರಾಮಸ್ಥರು ಬೆಳ್ಮಣ್ ಪಂಚಾಯತ್ ಗೆ ದೂರು ನೀಡಿದ್ದಾರೆ. ‌ಈ ಕುರಿತು ಆಹಾರ ನಿರೀಕ್ಷರಿಗೆ ಮಾಹಿತಿ ದೊರೆತಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ 8 ದಿನಗಳ ಹಿಂದೆ ಒಂದಿಬ್ಬರು ಗ್ರಾಹಕರಿಗೆ ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ರೀತಿಯ ಅಕ್ಕಿ ದೊರೆತಿದ್ದು, ಈ ಕುರಿತು ತಕ್ಷಣವೇ ಆಹಾರ ನಿರೀಕ್ಷಕರಿಗೆ ದೂರು ನೀಡಿದ್ದೇವೆ. ಒಂದು ಗೋಣಿಯಲ್ಲಿ ಇಂತಹ ಅಕ್ಕಿ ದೊರೆತಿದೆ. ಎಲ್ಲಿ ಕಲಬೆರಕೆಯಾಗಿದೆ ಮತ್ತು ಯಾರಿಂದ ಆಗಿದೆ ಎನ್ನುವುದು ತನಿಖೆಯಾಗಿ ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಳ್ಮಣ್‌ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಬೆಳ್ಮಣ್‌ ಸೊಸೈಟಿಯಿಂದ ನೀಡಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ರೀತಿಯ ಅಕ್ಕಿ ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ರಾಜ್ಯದ ವಿವಿಧೆಡೆಯಿಂದ ಉಡುಪಿ ಎಸ್‌ಸಿಐ ಕೇಂದ್ರಕ್ಕೆ ಅಕ್ಕಿ ತಂದು ಸಂಗ್ರಹಿಸಲಾಗುತ್ತಿದೆ.
ಆಶಾ
ಆಹಾರ ನಿರೀಕ್ಷಕರು, ತಾಲೂಕು ಕಚೇರಿ ಕಾರ್ಕಳ

















































































error: Content is protected !!
Scroll to Top