ದ್ವಿಚಕ್ರ ಸವಾರರು ಓದಲೇ ಬೇಕಾದ ಮಾಹಿತಿ
ಮೋಟಾರು ವಾಹನ ಕಾಯ್ದೆ 130, 202, 206, 207 ರ ಪ್ರಕಾರ ಕರ್ತವ್ಯದಲ್ಲಿದ್ದ ಯಾವುದೇ ಪೊಲೀಸರಿಗೆ (ಕಾನ್‌ಸ್ಟೇಬಲ್) ಮೋಟಾರು ವಾಹನಗಳನ್ನು ನಿಲ್ಲಿಸಿ, ಚಾಲನಾ ಪರವಾನಿಗೆ (ಡಿಎಲ್), ವಾಹನದ ದಾಖಲೆಯನ್ನು ಪರಿಶೀಲನೆ ನಡೆಸುವ ಅಧಿಕಾರವಿರುವುದು. ಆದರೆ, ವಾಹನ ವಶಪಡಿಸಿಕೊಳ್ಳುವ ಅಧಿಕಾರವಿಲ್ಲ. ಕರ್ತವ್ಯದಲ್ಲಿದ್ದ ಅಧಿಕಾರಿಗಳು ದಾಖಲೆಗಳನ್ನು ಕೇಳಿದಾಗ ನೀಡುವುದು ವಾಹನ ಸವಾರರ ಕರ್ತವ್ಯವಾಗಿರುವುದು.
ವಾಹನ ಸವಾರರು ದಾಖಲೆ ನೀಡದೇ ಇದ್ದಾಗ
ಸವಾರನ ಅಥವಾ ವಾಹನದ ಕುರಿತು ಪೊಲೀಸರಿಗೆ ಅನುಮಾನ ಬಂದಾಗ
ಸವಾರನು ಸುಳ್ಳು ಹೇಳುತ್ತಿದ್ದಾನೆ ಎಂದು ಅಧಿಕಾರಿಗಳಿಗೆ ಅನಿಸಿದಾಗ
ಅಪರಾಧ ಕೃತ್ಯದಲ್ಲಿ ತೊಡಗಿದ್ದು ಆತನು ಅಥವಾ ವಾಹನ ಬೇಕಾಗಿದ್ದಲ್ಲಿ
ಸವಾರನು ಅಮಲು ಪದಾರ್ಥ ಸೇವಿಸಿ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ
ತೀರಾ ನಿರ್ಲಕ್ಷತನ, ಅತಿ ವೇಗ ಹಾಗೂ ಅಜಾಗರೂಕತೆಯಿಂದ ಅಥವಾ ಮೂವರು ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ
ಮೊಬೈಲ್ ಬಳಕೆ ಮಾಡುತ್ತಿದ್ದಲ್ಲಿ, ಇತರರ ಜೀವಕ್ಕೆ ಸಂಚಕಾರ ತರುವ ರೀತಿಯಲ್ಲಿ ಚಾಲನೆ ಮಾಡುವ ಸಂದರ್ಭಗಳಲ್ಲಿ ವಾಹನ ಮತ್ತು ಸವಾರನನ್ನು ವಶಕ್ಕೆ ಪಡೆದು, ಮೇಲಾಧಿಕಾರಿಗಳಿಗೆ ವರದಿ ನೀಡುವ ಅಧಿಕಾರ ಕೆಳಗಿನ ದರ್ಜೆಯ ಅಧಿಕಾರಿ(ಕಾನ್ಸ್ಟೇಬಲ್)ಗಳಿಗೆ ಇರುವುದು.
ವಶಪಡಿಸಿಕೊಂಡ ನಂತರ ವಾಹನ ಮತ್ತು ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಠಾಣಾಧಿಕಾರಿಯವರಿಗೆ ವರದಿ ನೀಡುವುದು ಪೊಲೀಸರ ಕರ್ತವ್ಯವಾಗಿದೆ. ವಿಚಾರಣೆ ನಡೆಸಿ ವಾಹನ ಮತ್ತು ಸವಾರನ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಪಿಎಸ್‌ಐ ದರ್ಜೆಗಿಂತ ಮೇಲಿನ ಅಧಿಕಾರಿಯವರಿಗೆ ಮಾತ್ರ ಇರುವುದೇ ಹೊರತು ಅವರಿಗಿಂತ ಕೆಳಗಿನ ದರ್ಜೆ ಅಧಿಕಾರಿಯವರಿಗೆ ಆ ಅಧಿಕಾರವಿರುವುದಿಲ್ಲ. ಪಿಎಸ್‌ಐ ದರ್ಜೆಗಿಂತ ಕೆಳಗಿನ ದರ್ಜೆ ಅಧಿಕಾರಿಗಳು ವಾಹನ ದಾಖಲೆ ಪರಿಶೀಲಿಸಬಹುದೇ ಹೊರತು ವಾಹನದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಅಧಿಕಾರ ಇರುವುದಿಲ್ಲ ಮತ್ತು ಮಾರ್ಗದಲ್ಲಿ ದಂಡ ವಸೂಲಿ ಮಾಡಲು ಅಧಿಕಾರ ಇರುವುದಿಲ್ಲ. ಕರ್ನಾಟಕ ಪೊಲೀಸ್ ಕಾಯ್ದೆ (K.P.Act) 92 (1)F ಪ್ರಕಾರ ವಾಹನ ಸವಾರರಿಗೆ ನೋಟಿಸು ನೀಡುವ ಅಧಿಕಾರ ಪಿಎಸ್‌ಐ ದರ್ಜೆಗಿಂತ ಕೆಳಗಿನ ಅಧಿಕಾರಿಗಳಿಗಿದೆ.































































