ಇಒ ಡಾ. ಹರ್ಷ ಕೆ.ಬಿ. ಅವರಿಗೆ ದಾವಣಗೆರೆಗೆ ವರ್ಗಾವಣೆ

ಕಾರ್ಕಳ : ಕಾರ್ಕಳ ಹಾಗೂ ಹೆಬ್ರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಹರ್ಷ ಕೆ.ಬಿ. ದಾವಣಗೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ಕಾರ್ಕಳ ನೂತನ ಇಒ ಆಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್. ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಕುರಿತು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ
2010ರಲ್ಲಿ ಭಾರತೀಯ ಸೇನೆಯಲ್ಲಿ ವೈದ್ಯಾಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಹರ್ಷ ಅವರು 5 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 2015ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ಎದುರಿಸಿ ತೇರ್ಗಡೆಗೊಂಡ ಮೇ. ಡಾ. ಹರ್ಷ ಕೆ.ಬಿ., 2018ರ ಮಾರ್ಚ್‌ನಲ್ಲಿ ಕಾರ್ಕಳ ತಾ.ಪಂ. ಇಒ ಆಗಿ ಕರ್ತವ್ಯಕ್ಕೆ ಸೇರಿಸಿದ್ದರು.

























































































































error: Content is protected !!
Scroll to Top