ಆರೋಗ್ಯ ರಕ್ಷಣೆಗಾಗಿ ಶ್ರೀ ಭುವನೇಂದ್ರ ಮೆಡಿಕಲ್‌ ಮಿಷನ್‌ ಸ್ಥಾಪನೆ-ಡಾ. ಕೆ.ಆರ್.‌ ಜೋಶಿ

ಕಾರ್ಕಳ : ಜೀವನ ಶೈಲಿಯ ರೋಗಗಳಾದ ಡಯಾಬಿಟೀಸ್‌, ಬಿಪಿ, ಕೊಲೆಸ್ಟ್ರಾಲ್‌, ಹೃದಯ ಸಂಬಂಧಿ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸಲಹೆ ನೀಡುವ ನಿಟ್ಟಿನಲ್ಲಿ ಶ್ರೀ ಭುವನೇಂದ್ರ ಮೆಡಿಕಲ್‌ ಮಿಷನ್‌ ಸ್ಥಾಪಿಸಲಾಗಿದೆ. ಹತ್ತಾರು ಆರೋಗ್ಯ ತಪಾಸಣಾ ಶಿಬಿರಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ಬಿಎಸ್‌ಬಿ ಸಮಾಜದ ಬಾಂಧವರಿಗೆ ಕಳೆದ 5 ವರ್ಷಗಳಲ್ಲಿ 9 ಲಕ್ಷ ರೂ. ಮೌಲ್ಯದ ಆರೋಗ್ಯ ಸೇವೆ, 13 ಲಕ್ಷ ರೂ. ಔಷಧೀಯ ನೆರವು ನೀಡಲಾಗಿದೆ ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಕೆ.ಆರ್. ಜೋಶಿ ಹೇಳಿದರು.
ಅವರು ಜ. 17ರಂದು ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ಸಂಸ್ಥೆ ಕಾರ್ಕಳ ಇದರ ಆಶ್ರಯದಲ್ಲಿ ಕಾರ್ಕಳದ ಕಾಶಿಮಠದಲ್ಲಿ ನಡೆದ ಜೀವನ ಶೈಲಿಯ ರೋಗಗಳ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಬ್ಯಾಂಕ್‌ ಅಧಿಕಾರಿ ಎರ್ಮಾಳ್ ಮೋಹನ್ ಶೆಣೈ ಮಾತನಾಡಿ,‌ ಶ್ರೀ ಭುವನೇಂದ್ರ ಮೆಡಿಕಲ್‌ ಮಿಷನ್‌ ಸಂಸ್ಥೆಯು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ತಪಾಸಣೆ, ಔಷಧಿಗೆ ನೆರವಾಗುವ ಮೂಲಕ ಸಂಸ್ಥೆ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ರವೀಂದ್ರನಾಥ ಪೈ, ರೋಟರಿ ಸದಸ್ಯೆ ಗೀತಾ ಕಾಮತ್, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 75 ಮಂದಿಯ ಬಿಪಿ ಪರೀಕ್ಷೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಪೈ ವಂದಿಸಿದರು.



































































































error: Content is protected !!
Scroll to Top