ಕಾರ್ಕಳ ಬೈಪಾಸ್‌ ರಸ್ತೆಯಲ್ಲಿ ಕಾರು ಬೈಕ್‌ಗೆ ಡಿಕ್ಕಿ-ಸವಾರನಿಗೆ ಗಾಯ

ಕಾರ್ಕಳ : ಬೈಪಾಸ್‌ ರಸ್ತೆಯಲ್ಲಿ ಕಾರು (ಕೆಎ 50 ಎಂ 8534) ಬೈಕ್‌ಗೆ (ಕೆಎ 20 ಇಎಸ್‌ 5417) ಡಿಕ್ಕಿ ಹೊಡೆದ ಘಟನೆ ಕಾರ್ಕಳ ಬೈಪಾಸ್‌ ಬಳಿ ಮಂಗಳವಾರ ನಡೆದಿದೆ. ಸ್ವಾಮಿ ಲಾಂಡ್ರಿ ಸಮೀಪ ಕುಂದಾಪುರದಿಂದ ಬೆಂಗಳೂರು ಸಾಗುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಪ್ರವೀಣ್‌ ಎಂಬವರು ಗಾಯಗೊಂಡಿದ್ದಾರೆ. ಕಾರಿನ ರಭಸಕ್ಕೆ ಲಾಂಡ್ರಿ ಪಕ್ಕದಲ್ಲಿದ್ದ ಬೈಕ್‌ (ಕೆಎ 20 ಇಎಚ್‌ 0812) ಕೂಡ ಪಲ್ಟಿಯಾಗಿದ್ದು, ಜಖಂಗೊಂಡಿದೆ.























































































































error: Content is protected !!
Scroll to Top