ಕಾರ್ಕಳ : ನಾವೆಲ್ಲಾ ಸಹೋದರ-ಸಹೋದರಿಯರು ಎಂಬ ಧ್ಯೇಯವಾಕ್ಯದಡಿ ಜಾತಿ-ಮತ ಭೇದಗಳನ್ನು ಮರೆತು ಒಂದಾಗಿ ಜೀವಿಸೋಣ ಎಂದು ಉಡುಪಿ ಕಲ್ಮಾಡಿ ವೆಲಂಕಣ್ಣಿ ಮಾತೆ ದೇವಾಲಯದ ಧರ್ಮಗುರು ಫಾದರ್ ಆಲ್ಬನ್ ಡಿ’ಸೋಜಾ ಕರೆಕೊಟ್ಟರು. ಅವರು ಮಂಗಳವಾರ ಅತ್ತೂರು ವಾರ್ಷಿಕ ಮಹೋತ್ಸವದ ಬಲಿಪೂಜೆ ಅರ್ಪಿಸಿ ಬಳಿಕ ಆಶೀರ್ವಚನ ನೀಡಿದರು.
ದಿನದ ಇತರ ಬಲಿಪೂಜೆಗಳನ್ನು ಪೆರುವಾಯಿಯ ಫಾದರ್ ಜೇಸನ್ ಮೊನಿಸ್, ಅಜೆಕಾರಿನ ಫಾದರ್ ಸ್ಟೇನಿ ಡಿ’ಕುನ್ಹ, ಕೆಮ್ಮಣ್ಣಿನ ಫಾದರ್ ವಿಕ್ಟರ್ ಜೆರಾಲ್ಡ್ ಡಿ’ಸೋಜಾ ಹಾಗು ಮಂಗಳೂರು ಫಾದರ್ ಮುಲ್ಲರ್ಸ್ ಸಂಸ್ಥೆಯ ಫಾದರ್ ಅಜಿತ್ ಮಿನೇಜಸ್‍ರವರು ನೆರವೇರಿಸಿದರು. ಅತ್ತೂರು ಚರ್ಚ್‌ನ ಮುಖ್ಯ ಗುರು ಫಾದರ್ ಜೋರ್ಜ್ ಡಿ’ಸೋಜಾ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿತು.




























































