ಮಾಳ : ಬಸ್‌ಗೆ ಬೈಕ್‌ ಡಿಕ್ಕಿ-ಸವಾರನಿಗೆ ಗಂಭೀರ ಗಾಯ

ಕಾರ್ಕಳ : ಕಾರ್ಕಳ ತಾಲೂಕಿನ ಮಾಳದಲ್ಲಿ ಜ. 1ರಂದು ಬೈಕ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭಿಸಿಲ್ಲ.

ಕಾರ್ಕಳದಲ್ಲಿ ಸರಣಿ ಅಪಘಾತ
ಡಿ. 31ರಂದು ರಸ್ತೆಯಲ್ಲಿ ನ್ಯೂ ಯಿಯರ್‌ ಬರೆಯುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದು ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ ಮೂಲದ ಶರಣು (26) ಹಾಗೂ ಸಿದ್ಧು (35) ಸಾವನ್ನಪ್ಪಿದ್ದರು. ಮೂಡಬಿದ್ರೆಯಲ್ಲಿ ನಡೆದ ಬೈಕ್‌ ಅಪಘಾತದಲ್ಲಿ ಕಾರ್ಕಳ ಕುಂಟಲ್ಪಾಡಿಯ ಯುವಕ ಅಶ್ವಿಲ್‌ ಸ್ಯಾಮ್ಸನ್‌ ಸೋನ್ಸ್‌ (21) ಡಿ. 31ರಂದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಶೃಂಗೇರಿ ಕಡೆಯಿಂದ ಮಂಗಳೂರು ಸಾಗುತ್ತಿದ್ದ ಲಾರಿಯೊಂದು (ಎಪಿ 05 ಟಿಎ 1236) ಮಾಳ ಘಾಟಿಯಲ್ಲಿ ಗುಡ್ಡೆಗೆ ಡಿಕ್ಕಿಯಾಗಿ ಲಾರಿ ಜಖಂಗೊಂಡಿದ್ದು, ಅದರಲ್ಲಿದ್ದ ಕಬ್ಬಿಣದ ಶೀಟ್‌ ಹಾನಿಗೀಡಾಗಿತ್ತು.
ಮಾಳ ಚೆಕ್‌ ಪೋಸ್ಟ್‌ ಬಳಿ ಓವರ್‌ ಟೇಕ್‌ ಮಾಡುವ ಭರದಲ್ಲಿ ಕಾರೊಂದು ಬೊಲೆರೊ ಜೀಪಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಕೆದಿಂಜೆ ಗ್ರಾಮದ ಮಂಜಲ್‌ ಪಲ್ಕೆ ಎಂಬಲ್ಲಿ ಸ್ಕೂಟಿ ಬೈಕ್‌ಗೆ ಡಿಕ್ಕಿಯಾಗಿ ಬೈಕ್‌ ಸವಾರ ಕಲ್ಯಾ ಗ್ರಾಮದ ಕೈರಬೆಟ್ಟು ಉತ್ತಮ್‌ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.























































































































error: Content is protected !!
Scroll to Top