ಕಾರ್ಕಳ ಹೆಬ್ರಿಯಲ್ಲಿ 36 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಕಾರ್ಕಳ : ಕಾರ್ಕಳ ತಾಲೂಕಿನ 29 ಹಾಗೂ ಹೆಬ್ರಿ ತಾಲೂಕಿನ 6 ಅಭ್ಯರ್ಥಿಗಳು ಪಂಚಾಯತ್‌ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಲ್ಲೂರು ಗ್ರಾ.ಪಂ. ನ 15 ಸ್ಥಾನಗಳ ಪೈಕಿ 9 ಮಂದಿ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಬೆಂಬಲಿತ ಸದಸ್ಯರೇ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸ್ಪಷ್ಟವಾಗಿದೆ. ಕಾರ್ಕಳ ಹೆಬ್ರಿ ಉಭಯ ತಾಲೂಕಿನಲ್ಲಿ ಅವಿರೋಧವಾಗಿ ಆಯ್ಕೆಯಾದವರು ಎಲ್ಲರೂ ಬಿಜೆಪಿ ಬೆಂಬಲಿತರೇ ಎನ್ನುವುದು ಗಮನಾರ್ಹ. ಕಳೆದ ಅವಧಿಯಲ್ಲಿ 27 ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತರೇ ಆಡಳಿತ ನಡೆಸಿದ್ದು, ಈ ಬಾರಿ ಮತ್ತಷ್ಟು ಪಂಚಾಯತ್‌ಗಳು ಬಿಜೆಪಿ ಪಾಲಾಗಲಿದೆ ಎನ್ನಲಾಗುತ್ತಿದೆ.
ಯಾರೆಲ್ಲ ಅವಿರೋಧ ಆಯ್ಕೆ
ದುರ್ಗಾ ಪಂ. ಗೆ ಉಮಾವತಿ, ಬೈಲೂರು ಪಂ. ಗೆ ಸುಜಾತ ಪೂಜಾರಿ, ನೀರೆ ಪಂ. ಗೆ ಶಾಲಿನಿ, ಸದಾನಂದ ನಾಯಕ್‌, ಅಮಿತಾ, ವೀಣಾ ಸುವರ್ಣ, ಪದ್ಮಾ, ನಿಟ್ಟೆ ಪಂ. ಗೆ ಬೇಬಿ ನಾಯ್ಕ್, ರಾಜೇಶ್‌ ಆಚಾರ್ಯ, ಶೋಭಾ, ಆಶಾ, ವೇದಾವತಿ, ಸುಭಾಶ್ಚಂದ್ರ ಹೆಗ್ಡೆ, ರಾಜಾಶ್ರೀ, ನಲ್ಲೂರು ಪಂ. ಗೆ ಜಯಕೀರ್ತಿ, ತಾರಾ ಮಲೆಕುಡಿಯ, ರತ್ನಾ, ಕವಿತಾ, ಶೋಭಾ, ನಳಿನಿ ಉಮಾನಾಥ್, ಅಶೋಕ್‌, ಗಾಯತ್ರಿ ಪ್ರಭು, ಲೋಕೇಶ್‌‌ ಶೆಟ್ಟಿ, ಬೋಳ ಪಂ. ಗೆ ಅಕ್ಷತಾ ಮೂಲ್ಯ, ರುಕ್ಕು, ಪೂರ್ಣಿಮಾ, ರಾಜಾಶ್ರೀ ನಾಯ್ಕ್‌, ನಂದಳಿಕೆ ಪಂ. ಗೆ ವಿನೋದಾ, ಅನ್ನಪೂರ್ಣ, ಸುಜಾತ, ಸುಧಾಕರ ಆಯ್ಕೆಯಾಗಿರುತ್ತಾರೆ. ಹೆಬ್ರಿ ತಾಲೂಕಿನ ನಾಡ್ಪಾಲು ಪಂ. ಗೆ ಸುಮಂಗಲ, ಸವಿತಾ, ವರಂಗ ಪಂ.ಗೆ ಪ್ರಮೀಳಾ ರಾಮ ನಾಯ್ಕ, ಶ್ರುತಿ, ಹೆಬ್ರಿ ಪಂ. ಗೆ ತಾರಾನಾಥ ಎಸ್.‌ ಬಂಗೇರಾ, ಚಾರ ಪಂ. ಗೆ ಜಯಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.















































































error: Content is protected !!
Scroll to Top