ಕಾರ್ಕಳದಲ್ಲಿ ಬಿರುಸಿನ ಮತದಾನ : 11 ಗಂಟೆಗೆ ಶೇ. 14 ಪೂರ್ಣ


ಕಾರ್ಕಳ : ಗ್ರಾ.ಪಂ. ಎರಡನೇ ಹಂತದ ಮತದಾನ ಭಾನುವಾರ ನಡೆಯುತ್ತಿದ್ದು, ತಾಲೂಕಿನಾದ್ಯಂತ ಬಿರುಸಿನಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತಕೇಂದ್ರಗಳಲ್ಲಿ ಬೆಳಗ್ಗೆನಿಂದಲೇ ಮತದಾರರು ಉತ್ಸಾಹದಲ್ಲಿರುವುದು ಕಂಡುಬಂತು. 27 ಗ್ರಾ.ಪಂ.ನ 187 ಮತಗಟ್ಟೆಗಳಲ್ಲೂ ಅಭ್ಯರ್ಥಿಗಳ ಬೆಂಬಲಿತ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣವಿದೆ. ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, 11 ವೇಳೆಗೆ 14 ಶೇ. ಮತದಾನವಾಗಿದೆ. ಕ್ಸಲ್‌ ಪೀಡಿತ ಗ್ರಾಮಗಳೆಂದು ಪರಿಗಣಿತವಾಗಿರುವ ನೂರಾಲ್‌ಬೆಟ್ಟು, ಈದು, ಮಾಳ, ಅಂಡಾರು, ಶಿರ್ಲಾಲು, ಕೆರ್ವಾಶೆಗಳಲ್ಲೂ ಪೊಲೀಸ್‌ ವಿಶೇಷ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.













































































error: Content is protected !!
Scroll to Top