ಕಾರ್ಕಳ : ಮಾಜಿ ಪ್ರಧಾನಿ, ಅಜಾತಶತ್ರು ಅಟಲ್‌ಬಿಹಾರಿ ವಾಜಪೇಯಿ ಅವರು 1980ರ ದಶಕದಲ್ಲಿ ಕಾರ್ಕಳಕ್ಕೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ವಾಜಪೇಯಿ ಅವರು ಕಾರ್ಕಳದ ಪ್ರಖ್ಯಾತ ಜವಳಿ ಉದ್ಯಮಿ ಪೂರ್ಣಿಮಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಪಾಂಡುರಂಗ ಪ್ರಭು ಅವರ ಪೆರ್ವಾಜೆ ರಸ್ತೆಯ ಕೇಶವ ಕೃಪಾ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ, ಮಾಜಿ ಉಪಮುಖ್ಯಮಂತ್ರಿ ದಿ. ಡಾ. ವಿ.ಎಸ್. ಆಚಾರ್ಯ, ಪೂರ್ಣಿಮಾ ಸಮೂಹ ಸಂಸ್ಥೆಗಳ ಪ್ರವರ್ತಕ ಕೇಶವ ರಾಮಚಂದ್ರ ಶೆಣೈ, ಉದ್ಯಮಿ ಉಮಾನಾಥ ಪ್ರಭು, ಬಿಜೆಪಿಯ ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಎಂ.ಕೆ. ವಿಜಯ ಕುಮಾರ್, ಯಶವಂತ ಪೈ, ರಾಮಚಂದ್ರ ನಾಯಕ್, ಮಾಜಿ ಪುರಸಭಾ ಅಧ್ಯಕ್ಷ ಕೆ.ಪಿ. ಶೆಣೈ, ಜಯಭಾರತಿಯ ಭರತ್‌ಭೂಷಣ್‌ಪೈ, ಬೋಳ ಚಂದ್ರಶೇಖರ್‌ಕಾಮತ್‌ಮೊದಲಾದವರು ವಾಜಪೇಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
Recent Comments
ಕಗ್ಗದ ಸಂದೇಶ
on
Please put more photos of Atalji’s Karkala visit. We are waiting.
Vajpeyi visited karkala in 1990 also .A Hanuman statue was made in mangalpade .