ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಯೋಗದೊಂದಿಗೆ ನಲ್ಲೂರು ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯುರ್ವೇದಿಕ್ ಗಿಡಗಳನ್ನು ಡಿ. 23ರಂದು ನೆಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್, ಉದ್ಯಮಿ ಹುರ್ಲಾಡಿ ರಘುವೀರ್ ಶೆಟ್ಟಿ, ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್, ಅಧ್ಯಕ್ಷ ಪ್ರಶಾಂತ್ ಬೆಳಿರಾಯ, ಮಾಜಿ ಅಧ್ಯಕ್ಷ ಸುರೇಂದ್ರ ನಾಯಕ್, ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿರ್ದೇಶಕ ಗಣೇಶ್, ಕಾರ್ಕಳ ತಾಲೂಕು ಯೋಜನಾಧಿಕಾರಿ ಭಾಸ್ಕರ್ ವಿ., ಚಿರಾಗ್, ಗಣೇಶ್ ಬರ್ಲಾಯ, ತಾ.ಪಂ. ಸದಸ್ಯ ಸುರೇಶ್ ಶೆಟ್ಟಿ, ಡಾ. ರಾಂದಾಸ್, ಡಾ. ವೆಂಕಟಗಿರಿ ರಾವ್, ಉದ್ಯಮಿ ಮಹಾವೀರ ಜೈನ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಜಗತ್‌ಪಾಲ್ ಕಡಂಬ, ಗೋಪು ಶೆಟ್ಟಿ, ಮಹಾಬಲ ಶೆಟ್ಟಿ, ರಮೇಶ್ ನಾಯಕ್,
ಶಾಂತಿರಾಜ್ ಜೈನ್, ಸತೀಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಚಂದ್ರಶೇಖರ್ ಶೆಟ್ಟಿ, ಕೃಷ್ಣ ಎಲ್. ಶೆಟ್ಟಿ, ಉದಯ ಸಾಲ್ಯಾನ್, ಎಸ್‌ಡಿಎಂಸಿ ಅಧ್ಯಕ್ಷ ಉಮಾನಾಥ್, ಅರಣ್ಯ ಇಲಾಖಾಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರ್ವಹಿಸಿದರು.
ನಲ್ಲೂರು ಶಾಲಾ ಆವರಣದಲ್ಲಿ ಆಯುರ್ವೇದಿಕ್ ಗಿಡಗಳ ನಾಟಿ









