ಸಮರ್ಥ ನಾಯಕನಿಗೆ ಸೂಕ್ತ ಜವಾಬ್ದಾರಿ

ಶಾಸನಾತ್ಮಕವಾಗಿ ಶಾಶ್ವತವಾಗಿ ಕಾಯ೯ನಿವ೯ಹಿಸುವ ರಾಜ್ಯದ ಪ್ರಮುಖವಾದ ಆಯೋಗವೆಂದರೆ ಹಿಂದುಳಿದ ವಗ೯ದ ಆಯೋಗ.ಇದು ಅತ್ಯಂತ ಜವಾಬ್ದಾರಿಯುತವಾಗಿ ನಿರಂತರವಾಗಿ ಅಧ್ಯಯನಶೀಲರಾಗಿ ಕಾಯ೯ನಿವ೯ಹಿಸ ಬೇಕಾದ ಸಂಸ್ಥೆ .ಹಾಗಾಗಿ ಇಂತಹ ಸಂಸ್ಥೆಗಳಿಗೆ ಅಧ್ಯಕ್ಷರನ್ನು ನೇಮಿಸುವಾಗ ಅತ್ಯಂತ ಜಾಗೃತಿಯಿಂದ ನಿಧಾ೯ರ ತೆಗೆದುಕೊಳ್ಳ ಬೇಕಾಗುತ್ತದೆ.ಈ ನಿಟ್ಟಿನಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ನೇಮಕಾತಿ ಅತ್ಯಂತ ಸೂಕ್ತ ಮತ್ತು ಸಮಯೋಜಿತ ನಿಧಾ೯ರವೆಂದೇ ಪರಿಗಣಿಸ ಬಹುದು.
ಜಯಪ್ರಕಾಶ್ ಹೆಗ್ಡೆ ಅವರ ವೈಯಕ್ತಿಕ ಆಹ೯ತೆ; ಪ್ರತಿಭೆ; ನಿಲುವು ಈ ಹುದ್ದೆಗೆ ಹೇಳಿ ಮಾಡಿಸಿದಂತಿದೆ. ಹೆಗ್ಡೆ ಕಾನೂನು ಪರಿಣಿತರೂ ಹೌದು.ಜಾತಿ ಮೀರಿ ಬೆಳೆದ ರಾಜಕಾರಣಿಯೂ ಆಗಿರುವ ಕಾರಣ ಎಲ್ಲಾ ವಗ೯ಕ್ಕೂ ನ್ಯಾಯ ಸಿಗುವಂತೆ ಆಲೋಚಿಸುವ ಮನಸ್ಥಿತಿ ಅವರಲ್ಲಿದೆ.
ಹಿಂದುಳಿದ ವಗ೯ದ ಆಯೋಗವೆಂದಾಗ ಬೇರೆ ಬೇರೆ ಜಾತಿ ವಗ೯ಗಳಿಂದ ಮೀಸಲಾತಿ ಹಾಗೂ ಇನ್ನಿತರ ಸವಲತ್ತುಗಳಿಗಾಗಿ ಸಾಕಷ್ಟು ರಾಜಕೀಯ ಒತ್ತಡ ಪ್ರಭಾವ ಬರುವ ಸಾಧ್ಯತೆ ಇರುವ ಕಾರಣ ಇದನ್ನೆಲ್ಲಾ ಸಮತೂಗಿಸಿಕೊಂಡು ಹೋಗುವ ಅಧ್ಯಕ್ಷರ ಅನಿವಾರ್ಯತೆಯೂ ಇದೆ. ಹೆಗ್ಡೆ ಅವರಿಗೆ ಇದೊಂದು ಸವಾಲಿನ ಜವಾಬ್ದಾರಿಯೂ ಆಗಿರುತ್ತದೆ.ಈ ಹುದ್ದೆಗೆ ಕ್ಯಾಬಿನೆಟ್ ಮಂತ್ರಿಗಳ ಸ್ಥಾನಮಾನದ ಜೊತೆಗೆ ಅಷ್ಟೇ ಹೊಣೆಗಾರಿಕೆಯೂ ಇದೆ.ಹಾಗಾಗಿ ಹೆಗ್ಡೆಯವರ ಪ್ರತಿಭೆಯನ್ನು ಈ ಹುದ್ದೆ ಹುಡುಕಿಕೊಂಡು ಬಂದಿದೆ ಅನ್ನುವುದು ಅಷ್ಟೇ ಸತ್ಯ.
ಹೆಗ್ಡೆಯವರಿಗೆ ತಾತ್ಕಾಲಿಕವಾಗಿ ಈ ಹುದ್ದೆ ತೃಪ್ತಿ ನೀಡುವುದಂತೂ ಸತ್ಯ ;ಆದರೆ ಅವರ ಮುಂದಿನ ಸಕ್ರಿಯ ರಾಜಕಾರಣದ ಬದುಕಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನುವುದನ್ನು ಸ್ವಲ್ಪದೂರದಲ್ಲಿ ನಿಂತು ಯೋಚಿಸಿದಾಗ ಈ ಹುದ್ದೆ ಹೆಗ್ಡೆ ಅವರ ಮುಂದಿನ ಸಕ್ರಿಯ ರಾಜಕಾರಣಕ್ಕೆ ಬ್ರೇಕ್ ಹಾಕಿದರೂ ಆಶ್ಚರ್ಯವಿಲ್ಲ.
ಈ ಹುದ್ದೆ ಹೆಗ್ಡೆ ಅವರಿಗೆ ಮೂರು ವಷ೯ದ ಕಾಲ ಅನುಭವಿಸಿದರು ಅಂತ ಇಟ್ಟುಕೊಳ್ಳಿ ;ಮುಂದೆ ಬರುವ ಅಸೆಂಬ್ಲಿ ಅಥವಾ ಲೋಕಸಭಾ ಚುನಾವಣೆಯ ಕಾಲದಲ್ಲಿ ಈ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸುವ ಅವಕಾಶ ತೀರ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಬಿಜೆಪಿ ಹೆಗ್ಡೆಯವರಿಗೆ ಈ ಹುದ್ದೆ ನೀಡುವಲ್ಲಿ ತುಂಬಾ ಚಾಣಾಕ್ಷತನವನ್ನೇ ತೋರಿದೆ ಅಂದರೂ ತಪ್ಪಾಗಲಾರದು.ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಾಗಲೇ ಹಲವರು ಹೇಳುತ್ತಿದ್ದರು “ಹೆಗ್ಡೆ ಅವರಿಗೆ ಬಿಜೆಪಿಯಲ್ಲಿ ಸೂಕ್ತವಾದ ಸ್ಥಾನಮಾನ ಸಿಗುವ ಬಗ್ಗೆ ಸಂಶಯವಿದೆ” ಎಂದು. ಅದು ಹೌದು ಅನ್ನುವ ತರದಲ್ಲಿ ಕಳೆದ ಲೋಕಸಭಾ ಮತ್ತು ವಿಧಾನ ಪರಿಷತ್ , ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದ್ದು ಅಷ್ಟೇ ಸತ್ಯ .ಬಿಜೆಪಿಯಿಂದ ಹೆಗ್ಡೆ ಅವರಿಗೆ ಅನ್ಯಾಯವಾಗುತ್ತಿದೆ ಅನ್ನುವ ಸಂದಭ೯ದಲ್ಲಿ ಅವರಿಗೆ ಕ್ಯಾಬಿನೆಟ್ ದಜೆ೯ಯ ಹುದ್ದೆ ಸಿಕ್ಕಿರುವುದು ಬಿಜೆಪಿ ಪಾಲಿಗೆ ನಿಷ್ಟುರದ ಮಾತಿನಿಂದ ಮುಕ್ತಿ ಸಿಕ್ಕಿರವುದಂತೂ ನಿಜ.ಮುಂದಿನ ಚುನಾವಣಾ ದೃಷ್ಟಿಯಿಂದ ಈ ಆಯ್ಕೆ ಬಿಜೆಪಿಗೆ ಇನ್ನಷ್ಟು ಬಲತರುವುದರಲ್ಲಿ ಯಾವುದೇ ಸಂಶಯವಿಲ್ಲ.ಬಿಜೆಪಿಯಲ್ಲಿ”ತಾಳಿದವನು ಬಾಳಿಯಾನು”ಅನ್ನುವ ಮಾತಿಗೆ ಈ ಆಯ್ಕೆ ಇನ್ನಷ್ಟು ಪುಷ್ಟಿ ನೀಡಿದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.ಪ್ರಬುದ್ಧ ರಾಜಕಾರಣಿ ಅನ್ನಿಸಿಕೊಂಡ ಹೆಗ್ಡೆ ಅವರಿಂದ ಎಲ್ಲಾ ವಗ೯ದ ಜನರಿಗೆ ನ್ಯಾಯ ಸಿಗಲಿ ಅನ್ನುವುದು “ನ್ಯೂಸ್ ಕಾಕ೯ಳದ ಆಶಯವೂ ಆಗಿದೆ.”
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ













































































































































































































































































error: Content is protected !!
Scroll to Top