ಮೇ 14ಕ್ಕೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ದೆಹಲಿ : ಲೋಕಸಭೆಯ 57 ಸ್ಥಾನಗಳಿಗೆ ಮತದಾನ ನಡೆಯಲಿರುವ 7ನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಗೆ ನಾಮನಿರ್ದೇಶನ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇ 14ರಂದು ವಾರಾಣಸಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಪ್ರಧಾನಿಯವರು ಮೇ 13ರಂದು ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿ ಬೃಹತ್ ರೋಡ್ ಶೋ ನಡೆಸಿ ಮೇ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ.

2024ರ ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನವು ಜೂ. 1ರಂದು 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿದೆ. ಚುನಾವಣಾ ಆಯೋಗವು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಮೇ 14ರಂದು ನಾಮಪತ್ರ ಸಲ್ಲಿಸಲು ಗಡುವು ಎಂದು ನಿಗದಿಪಡಿಸಲಾಗಿದ್ದು, ಮೇ 15ರಂದು ನಾಮಪತ್ರಗಳ ಪರಿಶೀಲನೆಗೆ ದಿನವನ್ನು ನಿಗದಿಪಡಿಸಲಾಗಿದೆ. ಚುನಾವಣೆಯ ಅಭ್ಯರ್ಥಿಗಳು ಮೇ 17ರವರೆಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಅವಕಾಶವಿದೆ.























































































































































error: Content is protected !!
Scroll to Top