ಬೆಂಗಳೂರು, ನ.19 : ಚುನಾವಣಾ ತಕರಾರು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ್ ಖಂಡ್ರೆ ಅವರಿಗೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ವಿಧಾನಸಭೆ ಚುನಾವಣೆ ವೇಳೆ ಈಶ್ವರ್ ಖಂಡ್ರೆ ಆಸ್ತಿ ವಿವರಗಳನ್ನು ಸಲ್ಲಿಸದೆ ಅಕ್ರಮ ಎಸಗಿದ್ದಾರೆ. ಅವರ ಆಯ್ಕೆಯನ್ನುಅನೂರ್ಜಿತಗೊಳಿಸಬೇಕೆಂದು ಅರ್ಜಿದಾರ ಸಿದ್ದರಾಮ ಎಂಬವರು ಆರೋಪಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠ ಈಶ್ವರ್ ಖಂಡ್ರೆ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ ಈ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ಪಾವತಿಸಲು ಸೂಚನೆ ನೀಡಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ 5 ಲ.ರೂ. ದಂಡ ಹಾಕಿದ ಹೈಕೋರ್ಟ್



















