Homeಸ್ಥಳೀಯ ಸುದ್ದಿಉಮೇಶ್ ಗೌತಮ್ ನಾಯಕ್ ಅವರಿಗೆ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ

Related Posts

ಉಮೇಶ್ ಗೌತಮ್ ನಾಯಕ್ ಅವರಿಗೆ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ

ಕಾರ್ಕಳ, ನ. 2 : ನ್ಯೂಸ್ ಕಾರ್ಕಳ ಸುದ್ದಿ ಜಾಲತಾಣದ ಚೊಚ್ಚಲ “ಕನ್ನಡ ಸಾರಥಿ” ಪ್ರಶಸ್ತಿಯನ್ನು ಕವಿ, ತ್ರಿಭಾಷಾ ಅಷ್ಟಾವಧಾನಿ, ಸಂಗೀತ ಗುರು, ನಿವೃತ್ತ ಶಿಕ್ಷಕ ಉಮೇಶ್ ಗೌತಮ್ ನಾಯಕ್ ಅವರಿಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರದಾನಿಸಿ ಗೌರವಿಸಲಾಯಿತು.
ನ. 1ರಂದು ಎಂಪಿಎಂ ಕಾಲೇಜಿನಲ್ಲಿ ನಡೆದ ಕನ್ನಡ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ. ಎಸ್.‌ ಅವರು ಸನ್ಮಾನದೊಂದಿಗೆ ಪ್ರಶಸ್ತಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಅನಂತಕೃಷ್ಣ ಶೆಣೈ,ನ್ಯೂಸ್‌ ಕಾರ್ಕಳ ಡಾಟ್‌ ಕಾಮ್‌ ನ ಮಾರ್ಗದರ್ಶಿ ಮಂಡಳಿಯ ಸದಸ್ಯರಾದ ಸಂದೀಪ್‌ ಕೋಟ್ಯಾನ್‌, ಪದ್ಮಪ್ರಸಾದ್‌ ಜೈನ್‌,ರಾಜೇಂದ್ರ ಭಟ್‌ ಕೆ. ಸಿಯಾ ಸಂತೋಷ್‌ ನಾಯಕ್‌, ಮಜಾ ಟಾಕೀಸು ಮೋಹನ್‌, ಇಗ್ನೇಶಿಯಸ್‌ ಪೌಲ್‌ , ಪ್ರಧಾನ ಸಂಪಾದಕ ರಾಮಚಂದ್ರ ಬರೆಪ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest Posts

error: Content is protected !!