Homeರಾಜ್ಯ90 ಲ.ರೂ., ಬೆಲೆಬಾಳುವ ಡ್ರಗ್‌ ವಶ : 10 ಮಂದಿ ಬಂಧನ

Related Posts

90 ಲ.ರೂ., ಬೆಲೆಬಾಳುವ ಡ್ರಗ್‌ ವಶ : 10 ಮಂದಿ ಬಂಧನ

ಬೆಂಗಳೂರು, ನ. 2 : ನಗರದ ಸಿಸಿಬಿ ಪೊಲೀಸರಿಂದು ಭರ್ಜರಿ ಡ್ರಗ್‌ ಬೇಟೆಯಾಡಿದ್ದಾರೆ. ಎಂಟು ಕಡೆ ದಾಳಿ ನಡೆಸಿ 90 ಲ.ರೂ. ಬೆಲೆಬಾಳುವ ಮಾದಕ ವಸು ವಶಪಡಿಸಿಕೊಂಡು ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳು ಡಾರ್ಕ್‌ ವೆಬ್‌ ಮೂಲಕ ಈ ಮಾದಕ ವಸ್ತು ಖರೀದಿಸಿದ್ದರು. ಟೋರ್‌ ಬ್ರೌಸರ್‌ ಉಪಯೋಗಿಸಿ ಎಂಪಾಯರ್‌ ಮಾರ್ಕೆಟ್‌, ಸಿಲ್ಕ್‌ ರೂಟ್‌, ಡ್ರಗ್‌ ಬೋರ್ಡ್‌ ಮತ್ತಿತರ ವೆಬ್‌ಸೈಟ್‌ ಗಳಿಗೆ ಹೋಗಿ ಡ್ರಗ್‌ ಖರೀದಿಸಿದ್ದಾರೆ. ಬಿಟ್‌ ಕಾಯಿನ್‌ ಮೂಲಕ ಹಣ ಪಾವತಿ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಹಿತಿ ನೀಡಿದ್ದಾರೆ.
ಕೊರಿಯರ್‌ ಮತ್ತು ಅಂಚೆ ಮೂಲಕ ಉಡುಗೊರೆ ಪೊಟ್ಟಣದ ರೂಪದಲ್ಲಿ ಡ್ರಗ್‌ ಪಾರ್ಸೆಲ್‌ಗಳು ಅವರಿಗೆ ಬಂದಿದ್ದವು. ಈ ಡ್ರಗ್‌ ಅನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಸೆಲೆಬ್ರಿಟಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು.
ಎಚ್‌ ಎಸ್‌ ಆರ್‌ ಲೇಔಟ್‌, ವಿಜಯನಗರ, ಮಹಾಲಕ್ಷ್ಮಿಪುರಂ, ಹಲಸೂರು, ಕೆಜಿ ಹಳ್ಳಿ, ಇಂದಿರಾ ನಗರ , ಎಚ್‌ ಎ ಎಲ್‌ ಮತ್ತು ರಾಮಮೂರ್ತಿ ನಗರಗಳಲ್ಲಿ ದಾಳಿ ನಡೆಸಿ ಸಾರ್ಥಕ್‌ ಆರ್ಯ ,ನಿತಿನ್‌, ಕಾರ್ತಿಕ್‌ ಗೌಡ , ಝಮನ್‌ ಅಂಜಮಿನ, ಮೊಹಮ್ಮದ್‌ ಅಲಿ, ಅಮಲ್‌ ಬೈಜು, ಫೀನಿಕ್ಸ್‌ ಡಿ ಸೋಜ, ಶೋನ್‌ ಶಾಜಿ , ವೆಂಕಟ್‌ ವರುಣ್‌ ಮತ್ತು ಸನ್ನಿ ಓ ಇನ್ನೊಸೆಂಟ ಎಂಬವರನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!