ಜನಾಕ್ರೋಶಕ್ಕೆ ಮಣಿದ ಸರಕಾರ : ಮಾಸ್ಕ್‌ ದಂಡದ ಮೊತ್ತ 250 ರೂ.ಗೆ ಇಳಿಕೆ

ಬೆಂಗಳೂರು, ಅ.7: ಮಾಸ್ಕ್‌ ಧರಿಸದವರ ವಿರುದ್ಧ ದುಬಾರಿ ದಂಡ ವಸೂಲು ಮಾಡುತ್ತಿರುವ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸರಕಾರ ದಂಡದ ಮೊತ್ತವನ್ನು ಇಳಿಸಿದೆ.  

ಈ ಮೊದಲು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ಸಲುವಾಗಿ ನಗರ ಪ್ರದೇಶದಲ್ಲಿ 1,000 ರೂ. ಮತ್ತು ಗ್ರಾಮಾಂತರ ಭಾಗಗಳಲ್ಲಿ  500 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಒಂದೇ ವಾರದಲ್ಲಿ ಸರಕಾರ ಈ ಆದೇಶದಲ್ಲಿ ಮಾರ್ಪಾಡು ಮಾಡಿ ದಂಡದ ಮೊತ್ತವನ್ನು ಕಡಿಮೆ ಮಾಡಿದೆ. ಹೊಸ ಆದೇಶದಂತೆ ನಗರ ಪ್ರದೇಶದಲ್ಲಿ 250 ರೂ. ಮತ್ತು ಗ್ರಾಮಾಂತರ ಭಾಗಗಳಲ್ಲಿ 100 ರೂ. ದಂಡ ವಿಧಿಸಲಾಗುವುದು. ತಕ್ಷಣದಂತೆ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.   



































































































error: Content is protected !!
Scroll to Top