ಸೋಮವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ

ಬೆಂಗಳೂರು,ಸೆ. 20:  ಕೊರೊನಾ ಭೀತಿಯ ನಡುವೆಯೇ ರಾಜ್ಯದ ವಿಧಾನ ಮಂಡಲ ಅಧೀವೇಶನ ಸೋಮವಾರದಿಂದ ಪ್ರಾರಂಭವಾಗಲಿದೆ.

 ಅಧಿವೇಶನ ಸಮೀಪಿಸುತ್ತಿರುವಂತೆಯೇ  ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸೇರಿ ಮೂವರು ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಸದಸ್ರೆಲ್ಲ ಕೊರೊನಾ ಆತಂಕದ ನಡುವೆಯೇ ಅಧಿವೇಶನದಲ್ಲಿ ಭಾಗವಹಿಸಬೇಕಾಗಿದೆ.

ಕಳೆದ ಒಂದು ವಾರದಿಂದ ಈಚೆಗೆ ಪ್ರಮುಖ ಸಚಿವರಾದ ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜು, ಎನ್.ಗೋಪಾಲಯ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅಲ್ಲದೆ. ಪಿರಿಯಾಪಟ್ಟಣ ಶಾಸಕ ಕೆ.ಮಹದೇವ, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್, ಉಪಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಎಚ್.ಪಿ.ಮುಂಜುನಾಥ್ ಸೇರಿ ಹಲವು ಶಾಸಕರಿಗೆ ಈಗಾಗಲೇ ಸೋಂಕು ದೃಢಪಟ್ಟು ಚಿಕಿತ್ಸೆಯಲ್ಲಿದ್ದಾರೆ. ಶನಿವಾರ ಡಾ.ಸಿಎನ್.ಅಶ್ವತ್ಥನಾರಾಯಣ, ಎಂ.ಪಿ.ಕುಮಾರಸ್ವಾಮಿ. ಪ್ರಿಯಾಂಕ ಖರ್ಗೆಯವರಿಗೆ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಭಾನುವಾರ ಸಂಜೆಯೊಳಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿಯ ಸುಮಾರು 1 ಸಾವಿರ ಮಂದಿಯ ಆರ್’ಟಿ-ಪಿಸಿಆರ್ ಪರೀಕ್ಷಾ ವರದಿಗಳು ಬರಲಿದ್ದು, ಸೋಂಕಿತರ ಸಂಖ್ಯೆ ಉಲ್ಪಣವಾಗುವ ಸಾಧ್ಯತೆಗಳಿವೆ. ಇದರಿಂದ ಅಧಿವೇಶನದ ಮೇಲೆ ಕೊರೋನಾ ಕರಿನೆರಳು ಬೀರುವ ಸಾಧ್ಯತೆ ದಟ್ಟವಾಗಿದೆ. 

ಆರು ತಿಂಗಳ ನಂತರ ನಡೆಯುತ್ತಿರುವ ಅಭಿವೇಶನದಲ್ಲಿ ಸದಸ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳ ಸುರಕ್ಷತೆಗೆ ವಿವಿಧ ರೀತಿಯ ಸುರಕ್ಷತಾ ವ್ಯವಸ್ಥೆಯನ್ನು ಮಾಡಲಾಗಿದೆ. ಹಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ. ಹೆಚ್ಚು ಕಡಿಮೆ ಒಂದು ತಿಂಗಳಿಂದಲೇ ಸದಸ್ಯರ ಆಸನದ ನಡುವೆ ಅಂತರ ಕಾಪಾಡಲು ಪಾರದರ್ಶಕ ಫೈಬರ್ ಶೀಟ್ ಪರದೆ ಅಳವಡಿಸಲಾಗಿದೆ. ಈ ಬಾರಿ ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿಯನ್ನು ಸಾರ್ವಜನಿಕರ ಗ್ಯಾಲರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಸಭಾಧ್ಯಕ್ಷರು/ಸಭಾಪತಿಗಳ ಬಲಭಾಗದಲ್ಲಿನ ಗ್ಯಾಲರಿಯನ್ನು ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಅಧೀನ ಕಾರ್ಯದರ್ಶಿಗಿಂತ ಕೆಳಗಿರುವ ಅಧಿಕಾರಿಗಳಿಗೆ ಸಹ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 



































































































error: Content is protected !!
Scroll to Top