ಮೋದಿ ಅಂದರೆ ಕೆಲವರಿಗೆ ಇಷ್ಟ; ಕೆಲವರಿಗೆ ಕಷ್ಟ

ಮೋದಿ ಎಂಬ ಹೆಸರು ಕೇಳಿದರೆ ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ.ಹಾಗಾದರೆ ಈ ಇಷ್ಟಕ್ಕೆ ಏನು ಕಾರಣಗಳು.ಮೊದಲಾಗಿ ಅವರು ನಡೆದು ಬಂದ ದಾರಿ.ಕಷ್ಟದ ಒಂದೊಂದು ಮೆಟ್ಟಿಲೇರಿ ಬಂದವರು.ಯಾವುದೇ ಕುಟುಂಬದ ಹಿನ್ನೆಲೆಯಾಗಲಿ, ಹಣದ ಬಲವಿಲ್ಲದೆ ಸ್ವಂತ ಶ್ರಮದ ಏರಿಳಿತದಲ್ಲಿ ಅಧಿಕಾರಕ್ಕಾಗಿ  ಆಸೆ ಪಡದೆ  ಸಾಮರ್ಥ್ಯ ಯೋಗ್ಯತೆಯಿಂದಲೇ ದೇಶದ ಉನ್ನತ ಹುದ್ದೆ ಸ್ವೀಕರಿಸುವ ಅವಕಾಶ ಅವರಿಗೆ ಕೂಡಿಬಂತು.

ಇದಕ್ಕೆಲ್ಲ ಮುಖ್ಯಕಾರಣ ಅವರಲ್ಲಿರುವ ಪ್ರಾಮಾಣಿಕತೆ, ಶ್ರಮದ ಕಾಯ೯ಶೀಲತೆ, ಉತ್ತಮ ಉದ್ದೇಶ, ಹಿಡಿದ ಕೆಲಸ ಮಾಡಿಯೇ ತೀರ ಬೇಕೆಂಬ ಛಲ.ಅದಕ್ಕಾಗಿಯೇ ಪೂವ೯ಸಿದ್ದತೆ, ಇಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ.

ಒಬ್ಬ ವ್ಯಕ್ತಿಯಾಗಿ ದೇಶವನ್ನು ಒಗ್ಗೂಡಿಸುವ ಶಕ್ತಿ ಇದ್ದರೆ ಅದು ಮೋದಿಗೆ ಮಾತ್ರ.ಎಲ್ಲರನ್ನು ಒಂದಾಗಿ ರಾಷ್ಟ್ರದ ಕಲ್ಪನೆಯಲ್ಲಿ  ಕಾಣುವ ಪ್ರತಿಭೆಗಳನ್ನು ಗುರುತಿಸುವ  ಹೃದಯ ಸಿರಿವಂತಿಕೆ ಅವರಲ್ಲಿ ಇದೆ.ಆದರೆ ಕೆಲವರು ಕಾಣುವ ದೃಷ್ಟಿಯಲ್ಲಿನ ದೋಷದ ಕಾರಣ ಮೋದಿ ಹಿಂದುತ್ವದ ಪರ  ಅನ್ನಿಸಬಹುದು.ಧಮ೯ ಜಾತಿ ಆಧಾರಿತ ಆಡಳಿತ ನಡೆಸು ಜಾಯಮಾನ ಖಂಡಿತವಾಗಿಯೂ ಅವರಲ್ಲಿ ಇಲ್ಲ.ಒಂದು  ಪಕ್ಷದೊಳಗೆ ಜವಾಬ್ದಾರಿವಹಿಸಿಕೊಂಡಾಗ  ಪಕ್ಷದ ಇನ್ನಿತರ ಒತ್ತಡಗಳನ್ನು ಒಮ್ಮೆಲೆ ತಿರಸ್ಕರಿಸಿ ನಿಲ್ಲುವುದು ಕಷ್ಟಸಾಧ್ಯವೂ ಹೌದು.

ನಮ್ಮದು ವಿಶ್ವ ಅತೀದೊಡ್ಡ ಪ್ರಜಾಪ್ರಭುತ್ವ.ಸುಮಾರು 90 ಕೋಟಿಗಿಂತಲೂ ಹೆಚ್ಚು ಮತದಾರರು ಇರುವ ಜಗತ್ತಿನ ಏಕೈಕ ರಾಷ್ಟ್ರವಿದು.ಇಷ್ಟೊಂದು ಜನರ ಮನಸ್ಸು ಗೆದ್ದು ಏಕ ವ್ಯಕ್ತಿ ಏಕ ಪಕ್ಷ ಅಧಿಕಾರಕ್ಕೆ ಬರುವುದೆಂದರೆ ಅದು ಸುಲಭ ಮಾತಲ್ಲ.ಹಾಗಾಗಿಯೇ ಜನರು ಪ್ರತಿಯೊಂದು ತಪ್ಪಿಗೂ ಸರಿಗೂ ಪ್ರಧಾನಿ ಮೋದಿಯನ್ನೇ  ಬೊಟ್ಟುಮಾಡಿ ತೋರಿಸುವ ಸ್ಥಿತಿಗೆ ಬಂದಿದ್ದಾರೆ.ಇಂದು ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಅನ್ನುವ ರೀತಿಯಲ್ಲಿ ನಾವು ದೇಶದ ರಾಜಕೀಯ ನಾಯಕತ್ವವನ್ನು  ನೋಡುವ ಮನಸ್ಥಿತಿಯಲ್ಲಿದ್ದೇವೆ.ಇದಕ್ಕೆ ಮುಖ್ಯ ಕಾರಣ ಇದುವರೆಗೆ ನಮ್ಮನ್ನು ಆಳಿದ ಪಕ್ಷಗಳು ಉತ್ತಮ ಧ್ಯೇಯ,  ಉದ್ದೇಶ, ತತ್ವಗಳನ್ನು ಮರೆತು ಸ್ವಾಥ೯ ಪರ ಚಿಂತನೆ, ಕುಟುಂಬದ ರಾಜಕೀಯವೇ ಬದುಕು ಅನ್ನುವ ರೀತಿಯಲ್ಲಿ ತಮ್ಮ ಪಕ್ಷ ಬೆಳೆಸಿ ಕೊಂಡು ಬಂದಿರುವುದು.ಇದರಿಂದ ಜನ ಬೇಸತ್ತು ಪಕ್ಷ ಕ್ಕಿಂತಲೂ ವ್ಯಕ್ತಿಯೇ ಮುಖ್ಯ ಅನ್ನುವ ನಿಧಾ೯ರಕ್ಕೆ ಬಂದು ಬಿಟ್ಟಿದ್ದಾರೆ.ಒಂದು ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮೋದಿಗೆ ಸರಿಸಮಾನವಾದ ನಾಯಕನನ್ನು ಗುರುತಿಸಿಕೊಳ್ಳದಿದ್ದರೆ ಇಂದು ಕಾಂಗ್ರೆಸ್‌ಗೆ ಬಂದ ಗತಿಯೇ ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ.

ಮುಂದಂತೂ ಮೋದಿಯವರು ಈ ಬಿಜೆಪಿಗೆ ತನ್ನನ್ನು ಟ್ರಂಪ್ ಕಾರ್ಡ್‌ ಆಗಿ ಬಳಸಲು ಬಿಡುವುದಿಲ್ಲ ಅನ್ನುವುದು ಖಾತ್ರಿ.

ಮೋದಿ ಸರಕಾರ ತೆಗೆದುಕೊಂಡ ನಿಧಾ೯ರಗಳು ಪ್ರಜ್ಞಾವಂತ ಜನರ ಮನಸ್ಸನ್ನು ಸಾಕಷ್ಟು ಸೂರೆ ಗೊಂಡಿದೆ.ಅವರು ತೆಗೆದುಕೊಂಡು ತೀಮಾ೯ನಗಳೆಲ್ಲವೂ ಚೆನ್ನಾಗಿದೆ.ಕೆಲವೊಂದು ಅನುಷ್ಠಾನ ದಾರಿಯಲ್ಲಿ ನ್ಯೂನತೆಗಳಿಂದ ತೊಡಕಾಗಿರ ಬಹುದು.ಜನ ಬೆಂಬಲವಿದೆ ಯಾಕೆಂದರೆ ಅದರ ಹಿಂದಿರುವ ಉದ್ದೇಶ ಒಳ್ಳೆಯದಾದ ಕಾರಣ.ಜಮ್ಮು ಕಾಶ್ಮೀರದ ತಲೆ ತಿನ್ನುವ ವಿಧಿ 370 ಮತ್ತು 35A  ರದ್ದುಗೊಳಿಸಿದ್ದು, ಇದು ಯಾರಿಂದಲೂ ಸಾಧ್ಯವಾಗದ ಕೆಲಸ ಕೂಡ.ಕಪ್ಪು ಹಣವನ್ನು ಬಿಳಿದಾರಿಗೆ ತರುವ ಸುಧಾರಣೆ. ಇದರಿಂದ ಅದೆಷ್ಟೊ ಭ್ರಷ್ಟಾಚಾರ ,ಭಯೋತ್ಪಾದನೆ, ಕಳ್ಳವ್ಯವಹಾರಗಳಿಗೆ ಕಡಿವಾಣ ಬಿತ್ತು.ಹಾಗಾಗಿಯೇ ಕಳ್ಳ ಧನಿಕರು ಮೋದಿ ಹೆಸರು ಕೇಳಿದರೆ ಬೊಬ್ಬೆ ಹಾಕುವುದು.ಅಥಿ೯ಕತೆಯೇ ಬಿದ್ದು ಹೋಯಿತು ಅನ್ನುವ ತರದಲ್ಲಿ ಬಿಂಬಿಸುವುದು. ಏಕ ರಾಷ್ಟ್ರ ಏಕ ತೆರಿಗೆ, ಮಹಿಳಾ ಶೋಷಣೆ ಮುಕ್ತ ಗೊಳಿಸುವ ತ್ರಿಬಲ್ ತಲಾಖ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡ ನೀತಿ ನಿರೂಪಣೆ ಇತ್ಯಾದಿ.  ಮುಂದಿನ ಹೆಜ್ಜೆಗಳು ಇನ್ನೂ ರೋಚಕವಾಗಿರ ಬಹುದು.ಸಮಾನ ನಾಗರಿಕ ಸಂಹಿತೆ, ಏಕ ರಾಷ್ಟ್ರ ಏಕ ಚುನಾವಣೆ, ಅನಧಿಕೃತ ಆಸ್ತಿ ಮುಟ್ಟುಗೋಲು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಆಹ೯ತೆ ಇನ್ನಷ್ಟು ಬಿಗುಗೊಳಿಸುವುದು…ಇವೆಲ್ಲವೂ ಮೋದಿಜೀಯವರ ಮುಂದಿನ  ಆಡಳಿತಾವಧಿಯಲ್ಲಿ ಕಾಣಬೇಕಾದ ಸುಧಾರಣೆಗಳು.ಹಾಗಾಗಿಯೇ ಇರಬೇಕು ಕೆಲವರಿಗೆ ಮೋದಿಯೆಂದರೆ ತುಂಬಾ ಕಷ್ಟ, ಇಷ್ಟವಾಗುವುದೇ ಇಲ್ಲ.ಮೋದಿಯವರ ಆಡಳಿತಾವಧಿಯಲ್ಲಿ ಸಾಕಷ್ಟು ಸವಾಲು- ಸಮಸ್ಯೆಗಳನ್ನು ಎದುರಿಸ ಬೇಕಾದ ಕಷ್ಟ ಕಾಲವೂ ಒದಗಿ ಬಂತು.ಆದರೂ ಕೂಡಾ ಇವೆಲ್ಲವನ್ನೂ ಸಮಥ೯ವಾಗಿ ನಿಭಾಯಿಸುವಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ ಅನ್ನುವುದೇ ಇವರ ಆತ್ಮಶಕ್ತಿಯ ಇಚ್ಚಾಶಕ್ತಿಯ  ಫಲ.ಇಂತಹ ಸವಾಲುಗಳನ್ನು ದಾಟಿ ಬಂದಾಗಲೇ ಶ್ರೇಷ್ಠ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ .ಆದುದರಿಂದಲೇ ಪ್ರಧಾನಿ ಅನ್ನುವ ಮೋದಿಯ ಹೆಸರು ಸಾವ೯ಕಾಲಿಕವಾಗಿ ನಿಲ್ಲುತ್ತದೆ.

ಮೋದಿಗೆ ಇಂದು ಎಪ್ಪತ್ತು .ಈ ಎಪ್ಪತ್ತರಲ್ಲೂ  ಇಪ್ಪತ್ತರ ಹುರುಪಿದೆ. ಅವರ ನಡೆನುಡಿಯ ಸಂಪತ್ತು ಸಮೃದ್ಧಿಯಾಗಿಯೇ ಇದೆ.ಹಾಗಾಗಿ ಇನ್ನಷ್ಟು ಕಾಲ ಈ ದೇಶವನ್ನು ಮುನ್ನಡೆಸುವ ಸೌಭಾಗ್ಯ ನರೇಂದ್ರ ಪಾಲಿಗೆ ಒದಗಿ ಬರಲಿ ಅನ್ನುವುದೇ ಸಮಸ್ತ ರಾಷ್ಟ್ರಾಭಿಮಾನಿಗಳ ಶುಭ ಹಾರೈಕೆಯೂ ಹೌದು.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

































































































error: Content is protected !!
Scroll to Top