ರಾಜ್ಯಸಭಾ ಉಪಾಧ್ಯಕ್ಷರಾಗಿ ಹರಿವಂಶ್‌ ನಾರಾಯಣ್‌ ಸಿಂಗ್‌ ಆಯ್ಕೆ

ದಿಲ್ಲಿ, ಸೆ. 14:  ರಾಜ್ಯಸಭಾ ಉಪಾಧ್ಯಕ್ಷರಾಗಿ ಎನ್‌ಡಿಎ ಅಭ್ಯರ್ಥಿ ಜೆಡಿಯು ಪಕ್ಷದ ಸಂಸದ ಹರಿವಂಶ್ ನಾರಾಯಣ್ ಸಿಂಗ್ ಆಯ್ಕೆಯಾಗಿದ್ದಾರೆ. ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಸಿಂಗ್ ಅವರು ಆರ್‌ಜೆಡಿ ಸಂಸದ ಮನೋಜ್ ಜಾ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರತಿಪಕ್ಷ 61 ಸ್ಥಾನಗಳನ್ನು ಹೊಂದಿದ್ದು, ಎನ್‌ಡಿಎ 116 ಸ್ಥಾನಗಳನ್ನು ಹೊಂದಿದ್ದರಿಂದ ಸಿಂಗ್‌ ಪರವಾಗಿ ಹೆಚ್ಚು ಮತಗಳು ಬಿದ್ದವು.

ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರನ್ನು ಸಂಪರ್ಕಿಸಿದ್ದರು. ಎನ್‌ಡಿಎ ಕೂಟದಲ್ಲಿ ಇಲ್ಲದ ಪಕ್ಷಗಳಾದ ಬಿಜೆಡಿ ಮತ್ತು ವೈಎಸ್‌ಆರ್‌ಸಿಪಿ ಸಿಂಗ್‌ಗೆ ಬೆಂಬಲ ನೀಡಿದೆ. ಎಎಪಿ, ಎಸ್‌ಪಿ, ಸಿಪಿಐ (ಎಂ) ಮತ್ತು ಶಿವಸೇನೆಗಳು ಪ್ರತಿಪಕ್ಷದ ಅಭ್ಯರ್ಥಿಗಳು ಆರ್‌ಜೆಡಿಯ ಮನೋಜ್ ಜಾ ಅವರಿಗೆ ಬೆಂಬಲ ನೀಡಿದವು. ಟಿಆರ್‌ಎಸ್ ಮತದಾನದಿಂದ ದೂರವಿತ್ತು.

ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಸಿಂಗ್,  ಪ್ರಭಾತ್ ಖಬರ್ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿದವರು ಮತ್ತು ಭಾರತದ ಎಂಟನೇ ಪ್ರಧಾನಿ ಚಂದ್ರ ಶೇಖರ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

































































































error: Content is protected !!
Scroll to Top