2.35 ಲಕ್ಷ ಕೋ.ರೂ. ಜಿಎಸ್‌ಟಿ ಕೊರತೆ – ರಾಜ್ಯಗಳ ಎದುರು ಎರಡು ಆಯ್ಕೆ

ದಿಲ್ಲಿ, ಆ.27: 2020-21ನೇ ಸಾಲಿನ ವಿತ್ತೀಯ ವರ್ಷದಲ್ಲಿ 2.35  ಲಕ್ಷ ಕೋ.ರೂ. ಜಿಎಸ್‌ಟಿ ಕೊರತೆಯಾಗಲಿದೆ.  ಈ ಹಿನ್ನೆಲೆಯಲ್ಲಿ ಜಿಎಸ್ ಟಿ ಪರಿಹಾರ ಪಡೆದುಕೊಳ್ಳಲು ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ಐದು ತಾಸುಗಳ ಸುದೀರ್ಘ ಸಭೆಯಲ್ಲಿ ಜಿಎಸ್‌ಟಿ ಸಂಗ್ರಹ ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ವಿಚಾರವನ್ನು ಚರ್ಚಿಸಲಾಯಿತು.

97,000 ಕೋ.ರೂ. ಜಿಎಸ್‌ಟಿ ಅನುಷ್ಠಾನದಿಂದಾಗಿಯೇ  ನಷ್ಟವಾಗಿದೆ. ಉಳಿದ ಮೊತ್ತ ಕೊರೊನಾ ಪಿಡುಗಿನಿಂದಾಗಿ ಕೊರತೆಯಾಗಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಅಜಯ್‌ ಭೂಷಣ ಪಾಂಡೆ ಹೇಳಿದ್ದಾರೆ.

ರಾಜ್ಯಗಳಿಗೆ ಈ ಹಣಕಾಸು ವರ್ಷದಲ್ಲಿ ನೀಡಬೇಕಾಗಿರುವ ಜಿಎಸ್‌ ಟಿ ಸುಮಾರು 3 ಲಕ್ಷ ಕೋ.ರೂ. ಇದರಲ್ಲಿ 65,000 ಕೋ.ರೂ. ಜಿಎಸ್‌ಟಿ ಕಾಲದ ಸೆಸ್‌ನಿಂದ ಸಂಗ್ರಹವಾಗಲಿದೆ. 2.35 ಲಕ್ಷ ಕೋ.ರೂ. ಕೊರತೆಯಾಗಲಿದೆ. ಇದನ್ನು ಸರಿದೂಗಿಸಲು ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗುವುದು. ಏಳು ದಿನಗಳ ಒಳಗಾಗಿ ರಾಜ್ಯಗಳು ತಮ್ಮ ಆಯ್ಕೆಯನ್ನು ತಿಳಿಸಬೇಕೆಂದು ನಿರ್ಮಲಾ ಸೀತಾರಾಮನ್‌ ವಿವರಿಸಿದ್ದಾರೆ.

ರಾಜ್ಯಗಳು ಕೈಗೆಟಕುವ ಬಡ್ಡಿದರದಲ್ಲಿ 97,000ಕೋ.ರೂ.ಯನ್ನು ರಿಸರ್ವ್‌ ಬ್ಯಾಂಕಿನಿಂದ ಸಾಲ ಪಡೆಯುವುದು ಒಂದು ಆಯ್ಕೆ. ಈ ಮೊತ್ತವನ್ನು ಜಿಎಸ್‌ಟಿ ಅನುಷ್ಠಾನ ದಿನದಿಂದ ಹಿಡಿದು ಐದು ವರ್ಷಗಳಲ್ಲಿ ಮರು ಪಾವತಿ ಮಾಡಲಾಗುವುದು.

ಇನ್ನೊಂದು ಆಯ್ಕೆ ಪೂರ್ತಿ 2,35 ಲಕ್ಷ ಕೋ.ರೂ.ಯನ್ನು ಸಾಲವಾಗಿ ಪಡೆದುಕೊಳ್ಳುವುದು. ದೇವರ ಲೀಲೆಯಿಂದಾಗಿ ಆರ್ಥಿಕತೆ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಇದು ಅನಿವಾರ್ಯ ನಿರ್ಧಾರ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.









































































































error: Content is protected !!
Scroll to Top