ದೇಶೀಯ ಕೊರೊನಾ ಲಸಿಕೆಗಳ ಎರಡನೇ ಹಂತದ ಪರೀಕ್ಷೆ ಮುಕ್ತಾಯ ಹಂತಕ್ಕೆ

ದಿಲ್ಲಿ, ಆ. 20:  ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ  ಕೊರೋನಾ ಲಸಿಕೆಗಳ ಎರಡನೇ ಹಂತದ ಪ್ರಯೋಗ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿವೆ.   ಕೇಂದ್ರ ಸರ್ಕಾರ ನಿರ್ಧರಿಸಿದರೆ ಈ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಲಾಗುವುದು ಎಂದು ಐಸಿಎಂಆರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲಾ, ಸೆರಂ ಔಷಧ ಕಂಪೆನಿಗಳು ಅಭಿವೃದ್ಧಿಪಡಿಸಿರುವ  ಕೊರೊನಾ ಲಸಿಕೆಗಳು ಎರಡನೇ ಹಂತದ ಪ್ರಯೋಗಗಳನ್ನು ಮುಗಿಸುವ ಹಂತ ತಲುಪಿವೆ. ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾದ ಲಸಿಕೆಗಳು ರೋಗಿಗಳ  ಮೇಲೆ ಸಕರಾತ್ಮಕವಾದ  ಪರಿಣಾಮ ಬೀರುತ್ತಿದ್ದು, ಇವುಗಳ ಪ್ರಯೋಗಕ್ಕೆ ಒಳಪಟ್ಟವರು ಗುಣಮುಖರಾಗುತ್ತಿದ್ದಾರೆ  ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಂ ಭಾರ್ಗವ್ ಅವರು ಕೇಂದ್ರ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದಾರೆ.

ಸೆರಂ ಕಂಪನಿ ಆಕ್ಸ್‌ಫರ್ಡ್ ಜೊತೆ ಸೇರಿ ಸಂಶೋಧಿಸಿರುವ ಲಸಿಕೆ ಈ ವಾರಾಂತ್ಯದಲ್ಲಿ ಎರಡನೇ ಹಂತದ ಪ್ರಯೋಗಕ್ಕೆ ಒಳಪಡಲಿದೆ. ಇದನ್ನು ದೇಶದ 17 ಕೇಂದ್ರಗಳಲ್ಲಿ ಪ್ರಯೋಗಾರ್ಥವಾಗಿ ಬಳಕೆ ಮಾಡಲಾಗುತ್ತಿದ್ದು ಇದಕ್ಕಾಗಿ 1700 ಜನರನ್ನು ಗುರುತಿಸಲಾಗಿದೆ. ಈ ಪ್ರಾಯೋಗಿಕ ಪರೀಕ್ಷೆಗಳು 6 ರಿಂದ 9 ತಿಂಗಳುಗಳ ಕಾಲ ನಡೆಯಲಿವೆ. ಕೇಂದ್ರ ಬಯಸಿದರೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗುವುದಾಗಿಯೂ ತಿಳಿಸಿದ್ದಾರೆ.



































































































error: Content is protected !!
Scroll to Top