ಯುವ ಜನತೆ ದೇಶದ ಸಂಪತ್ತು : ವಾಸುದೇವ ಭಟ್‌

0

ನಿಟ್ಟೆ: ಭಾರತದ ಯುವಜನತೆ ದೇಶದ ಅತ್ಯಂತ ದೊಡ್ಡ ಸಂಪತ್ತು. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸ್ನೇಹ ಮನೋಭಾವವನ್ನು ಜಗತ್ತಿಗೆ ಪಸರಿಸುವುದರ ಮೂಲಕ ಜಾಗತಿಕ ಮಟ್ಟದಲ್ಲಿ ದೇಶವನ್ನು ಮತ್ತಷ್ಟು ಪ್ರಸಿದ್ಧವಾಗಿಸಲು ಸಾಧ್ಯವಿದೆ ಎಂದು ಡಾ. ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಭಟ್ ಅಭಿಪ್ರಾಯಪಟ್ಟರು.

ಅವರು ಆ. 15ರಂದು ನಿಟ್ಟೆ ಕ್ಯಾಂಪಸ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದರು. ಪ್ರತಿನಿತ್ಯದ ನೆಮ್ಮದಿಯ ಬದುಕಿಗೆ ದೇಶದ ಗಡಿ ಕಾಯವು ಯೋಧರೇ ಕಾರಣ. ವಿದ್ಯಾಭ್ಯಾಸದ ಸಂದರ್ಭದಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ. ಯಂತಹ ತಂಡಗಳಲ್ಲಿ ತೊಡಗಿಸುವುದರಿಂದ ದೇಶದ ಬಗೆಗಿನ ಒಲವು ಹೆಚ್ಚುತ್ತದೆ. ದೇಶದ ಏಳಿಗೆಗಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗುವುದು ಅತ್ಯಗತ್ಯ ಎಂದು ಅವರು ಹೇಳಿದರು.

ನಿಟ್ಟೆ ಕ್ಯಾಂಪಸ್‍ನ ರಿಜಿಸ್ಟ್ರಾರ್ ಪ್ರೊ. ಯೋಗೀಶ್ ಹೆಗ್ಡೆ, ಶಿಕ್ಷಕವೃಂದ, ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ನಿಟ್ಟೆ ವಿದ್ಯಾಸಂಸ್ಥೆಯ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಸುಬೇದಾರ್ ಹಿರಿಯಣ್ಣ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.---
Previous articleಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದೀನ್‌ ನಿಧನ
Next articleಭಾರಿ ಮಳೆ : ಉಡುಪಿಗೆ ಯೆಲ್ಲೋ ಅಲರ್ಟ್‌

LEAVE A REPLY

Please enter your comment!
Please enter your name here