
ಚೆನ್ನೈ, ಆ. 14 : ಕೊರೊನಾ ಸೋಂಕು ದೃಢಪಟ್ಟು ಚೆನ್ನೈಯ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಎಸ್. ಪಿ. ಬಾಲಸುದ್ರಹ್ಮಣ್ಯಂ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ.
ಆ.5ರಂದು ಎಸ್. ಪಿ. ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ಆರೋಗ್ಯ ಹದಗೆಡುತ್ತಿದೆ. ಚಿಕಿತ್ಸೆಗಾಗಿ ನುರಿತ ವೈದ್ಯರನ್ನು ಕರೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಎಸ್.ಪಿ.ಯವರನ್ನು ವೆಂಟಿಲೇಟರ್ ನಲ್ಲಿಡಲಾಗಿದೆ.
ಎಸ್.ಪಿ. ಕನ್ನಡ ಸೇರಿ ಹಲವು ಭಾಷೆಗಳ ಸಿನೆಮಾಗಳಿಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.