ಕಾರ್ಕಳ : ಪಳ್ಳಿ-ನಿಂಜೂರುನಲ್ಲಿ ಆ. 7 ರ ಸಂಜೆ ಟಿಪ್ಪರ್ ಒಂದು ನೀರಿನ ಹೊಂಡಕ್ಕೆ ಪಲ್ಟಿಯಾಗಿ ಚಾಲಕ ಹಾಗೂ ಟಿಪ್ಪರ್‌ನಲ್ಲಿದ್ದ ಮತ್ತೋರ್ವರು ಮೃತಪಟ್ಟ ಘಟನೆ ನಡೆದಿದೆ. ಟಿಪ್ಪರ್ ನಿಂಜೂರಿನಲ್ಲಿ ಸಾಗುತ್ತಿದ್ದ ವೇಳೆ ಪಕ್ಕದ ನೀರಿನ ಹೊಂಡಕ್ಕೆ ಬಿದ್ದ ಪರಿಣಾಮ ಚಾಲಕ ಗಣಿತನಗರ ನಿವಾಸಿ ಅರುಣ್ ಕುಮಾರ್ ಹಾಗೂ ಟಿಪ್ಪರ್ ನಲ್ಲಿದ್ದ ಮತೋರ್ವರು ಸ್ಥಳದಲ್ಲೇ ಮೃತರಾಗಿರುತ್ತಾರೆ. ಹೊಂಡದಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದ ಕಾರಣ ಅಲ್ಲಿಂದ ಹೊರಬರಲಾರದೇ ಇಬ್ಬರೂ ಅಸುನೀಗಿದರು.
ಅಶೋಕ್ ಬಸ್ ಚಾಲಕರಾಗಿದ್ದ ಅರುಣ್ ಕುಮಾರ್ ಅವರು ಬಸ್ ಸಂಚಾರವಿಲ್ಲದ ಕಾರಣ ಇತ್ತೀಚೆಗೆ ತಾತ್ಕಾಲಿಕ ನೆಲೆಯಲ್ಲಿ ಜಾರ್ಕಳ ಮೂಲದವರ ಮಾಲಿಕತ್ವದ ಟಿಪ್ಪರ್‌ಗೆ ಚಾಲಕರಾಗಿ ಸೇರಿದ್ದರು.