
ಕಾರ್ಕಳ : ಕಸಬಾ ಗ್ರಾಮದ ಮಂಗಲಪಾದೆ ನಿವಾಸಿ ವಿಕ್ಟರ್ ಫ್ರಾನಿಸ್ಸ್ ಡಿ’ಸೋಜಾ (60) ಅವರು ಆ. 6ರಂದು ಮೃತಪಟ್ಟಿರುತ್ತಾನೆ. ಆ. 5ರ ಬೆಳಗಿನ ಜಾವ ರಕ್ತವಾಂತಿ ಮಾಡಿಕೊಂಡಿದ್ದ ವಿಕ್ಟರ್ ಫ್ರಾನಿಸ್ಸ್ ಅವನನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆ. 6ರಂದು ಮೃತಪಟ್ಟಿದ್ದಾನೆ. ಕೊಲೆ ಆರೋಪದ ಕೇಸ್ ಹೊಂದಿರುವ ಫ್ರಾನ್ಸಿಸ್ ಡಿʼಸೋಜಾ ಜು. 20ರಂದು ಜಾಮೀನಿನ ಮೇರೆಗೆ ಜೈಲ್ ನಿಂದ ಬಿಡುಗಡೆಗೊಂಡಿದ್ದ.
ಮಗನ ಕೊಲೆ
8 ತಿಂಗಳ ಹಿಂದೆ ವಿಕ್ಟರ್ ಫ್ರಾನ್ಸಿಸ್ ಡಿʼಸೋಜಾ ಹಾಗೂ ಅವನ ಮಗ ವಿವಿಯನ್ ಡಿ ಸೋಜಾ ಒಟ್ಟಿಗೆ ಕುಡಿದು ಜಗಳ ಮಾಡಿಕೊಂಡಿದ್ದರು. ಕುಡಿತದ ಮತ್ತಿನಲ್ಲಿ ವಿಕ್ಟರ್ ಫ್ರಾನ್ಸಿಸ್ ಮಗನನ್ನು ಕಡಿದು ಕೊಲೆ ಮಾಡಿದ್ದನು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ವಿಕ್ಟರ್ ಬಂಧಿತನಾಗಿದ್ದನು.