ನಗರ ಬಿಜೆಪಿ ವತಿಯಿಂದ ಭಗವಧ್ವಜ ವಿತರಣೆ

ಕಾರ್ಕಳ : ಆ. 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಹಿನ್ನೆಲೆಯಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಆಶಯದಂತೆ ಕಾರ್ಕಳ ನಗರ ಬಿಜೆಪಿ ವತಿಯಿಂದ ಆ. 4ರಂದು ಪುರಸಭಾ ವ್ಯಾಪ್ತಿಯಲ್ಲಿ ಭಗವಧ್ವಜ ವಿತರಿಸಲಾಯಿತು. ಪುರಸಭೆಯ 23 ವಾರ್ಡ್‌ಗಳಲ್ಲೂ ಭಗವಧ್ವಜ ವಿತರಿಸಲಾಗಿದ್ದು, ಕ್ಯಾ. ರಮೇಶ್‌ ಕಾರ್ಣಿಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಉಪಾಧ್ಯಕ್ಷ ಯೋಗೀಶ್‌ ನಾಯಕ್‌, ರಮೇಶ್‌ ಶೆಟ್ಟಿಗಾರ್‌, ಪ್ರಧಾನ ಕಾರ್ಯದರ್ಶಿ ನಿರಂಜನ್‌  ಜೈನ್‌, ರವೀಂದ್ರ ಮೋಯಿಲಿ, ವಿಘ್ನೇಶ್‌, ರಮೇಶ್‌ ಶೆಟ್ಟಿ, ಗಣೇಶ್‌ ಆಚಾರ್ಯ, ಗಿರಿಧರ್‌ ನಾಯಕ್‌, ಸುಖೇಶ್‌ ಶೆಟ್ಟಿ,‌ ಪುರಸಭಾ ಸದಸ್ಯೆ ಭಾರತಿ ಅಮೀನ್‌,  ಗೀತಾ ಕಾಮತ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest Articles

error: Content is protected !!