ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದ ಕಾರ್ಕಳ ತಾಲೂಕಿನ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಮಾಳ ಗ್ರಾಮದ ಸೃಜನಾ ಚಿಪ್ಲೂಣ್ಕರ್, ಕುಕ್ಕುಂದೂರು ಗ್ರಾಮದ ಸ್ವಸ್ತಿಕ್, ಬಜೆಕಳದ ಭಾರ್ಗವಿ ಬಿ., ನಿಟ್ಟೆ ಗ್ರಾಮದ ವಸುಧಾ ಜಿ., ಬೈಲೂರಿನ ಪ್ರಜ್ಞಾ ಶ್ರೀ ಹೆಬ್ಬಾರ್, ಕಲ್ಲೊಟ್ಟೆಯ ಆತ್ರೇಯ ಮಹಾದೇವ, ಕಾರ್ಕಳದ ಮಾನಸ ರಾವ್ ಅವರನ್ನು ಅವರವರ ಮನೆಗೆ ತೆರಳಿ ಅಭಿನಂದಿಸಲಾಯಿತು. ಯುವ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಸಂಚಾಲಕ ರಾಮ್ ಭಟ್ ಸಾಣೂರು, ಕಾರ್ಯದರ್ಶಿ ವಿಘ್ನೇಶ್ ಜೆ.ಪಿ. ಪೆರ್ವಾಜೆ, ಕೋಶಾಧಿಕಾರಿ ವೆಂಕಟರಾಜ್ ಪೆರ್ವಾಜೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯ ರಾಜೇಶ್ ನಡ್ಯಂತಿಲ್ಲಾಯ ಹಾಗೂ ಸಂಘದ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನ
