ಕೊರೊನಾ ಇಲ್ಲದಿರುತ್ತಿದ್ದರೆ…

ಈ ಸಂದರ್ಭದಲ್ಲಿ ಕೊರೋನಾ ಇಲ್ಲದಿರುತ್ತಿದ್ದರೆ…ಅಯೋಧ್ಯೆಯಲ್ಲಿ ಎಷ್ಟು ಕೋಟಿ ಜನ ಸೇರುತ್ತಿದ್ದರು, ಜನರ ಸಂಭ್ರಮ, ಉತ್ಸಾಹ ಹೇಗಿರುತ್ತಿತ್ತು? ಎಂದು ಕಲ್ಪಿಸುವುದು ಕೂಡ ಅಸಾಧ್ಯ. ನಾಳೆಯ ದಿನಕ್ಕಾಗಿ ಇಡೀ ಅಯೋಧ್ಯಾ ನಗರವೇ ಮದುಮಗಳ ಹಾಗೆ ಸಿಂಗರಿಸಿ ಕೂತಿದೆ. ನಾಳೆ ನಡೆಯುವ ಧಾರ್ಮಿಕ ವಿಧಿಗಳನ್ನು ದೇಶ ಮತ್ತು ವಿದೇಶಗಳ ಹೆಚ್ಚಿನ ಸುದ್ದಿವಾಹಿನಿಗಳು ನೇರ ಪ್ರಸಾರ ಮಾಡಲಿವೆ. ಜಗತ್ತಿನ 130 ಕೋಟಿ ಹಿಂದೂಗಳು ನಾಳೆ ವಾಹಿನಿಗಳ ಮೂಲಕ ಜೀವನದ ಅವಿಸ್ಮರಣೀಯ ಕ್ಷಣಗಳು ಕಣ್ಣು ತುಂಬಿಸಿ ಕೊಳ್ಳಲಿದ್ದಾರೆ. ಶ್ರೀ ರಾಮ ಎಂದರೆ ಭಾರತದ ಸಾಕ್ಷಿ ಪ್ರಜ್ಞೆ.  ಅವನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಐದು ಶತಮಾನಗಳ ಕನಸು. ಆದ್ದರಿಂದ  ಅದೊಂದು ವಿರಾಟ್ ರೂಪದ ಮಹೋತ್ಸವ ಆಗುವುದು ಖಂಡಿತ. ಆ ಮಂದಿರವು ನಮ್ಮ ಜೀವಿತದ ಅವಧಿಯಲ್ಲಿ ಆಗಲಿದೆ ಅನ್ನುವುದೇ ಒಂದು ರೋಮಾಂಚಕ ಅನುಭವ.  ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಹೋಗಿ ಶ್ರೀ ರಾಮ ಮಂದಿರ ನೋಡಬೇಕು ಅನ್ನುವ ಸಂಕಲ್ಪ ಕೂಡ ಇಂದಿನಿಂದ ಆರಂಭ ಆಗಲಿದೆ.







































error: Content is protected !!
Scroll to Top