ತೆರೆ ಮೇಲೆ ಬರಲಿದೆ ಮಾದಕ ನಟಿ ಮಮತಾ ಕುಲಕರ್ಣಿ ಬದುಕಿನ ಕತೆ

ಮುಂಬಯಿ : ತೊಂಬತ್ತರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಬಾಲಿವುಡ್‌ನ ಮಾದಕ  ನಟಿ ಮಮತಾ ಕುಲಕರ್ಣಿ ಅವರ ಜೀವನವೇ ಈಗ ಸಿನೇಮಾ ಆಗುವ ಸಿದ್ಧತೆಯಲ್ಲಿದೆ.

ಮಮತಾ ಅವರ ವಿವಾದಾತ್ಮಕ ಜೀವನವನ್ನು ಆಧರಿಸಿದ ಚಿತ್ರವೊಂದನ್ನು ನಿರ್ಮಿಸಲು ತಯಾರಿ ನಡೆದಿದೆ. ಈ ಚಿತ್ರವು ಬಿಲಾಲ್ ಸಿದ್ದಿಕಿ ಅವರು ಬರೆದ ‘ ದಿ ಸ್ಟಾರ್‌ಡಸ್ಟ್ ಅಫೇರ್’ ಪುಸ್ತಕವನ್ನು ಆಧರಿಸಿದೆ. ನಿರ್ಮಾಪಕ ನಿಖಿಲ್ ದ್ವಿವೇದಿ ಈ ಪುಸ್ತಕದ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪುಸ್ತಕವು ಮಮತಾ ಕುಲಕರ್ಣಿಯ ಜೀವನದ ಏರಿಳಿತಗಳನ್ನು ಒಳಗೊಂಡಿದೆ. ಬಾಲಿವುಡ್ ತಾರೆ ಹಲವು ವಿಷಯಗಳಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ.

ಮಮತಾ ಕುಲಕರ್ಣಿ ತಮ್ಮ ಸಿನಿ ವೃತ್ತಿಜೀವನದಲ್ಲಿ ಕರಣ್-ಅರ್ಜುನ್, ಬಾಜಿ, ಚೀನಾ ಗೇಟ್, ತಿರಂಗಾ, ಕ್ರಾಂತಿವಿರ್ ಮತ್ತು ಸಬ್ಸೆ ಬಡಾ ಖಿಲಾಡಿ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 

ಚಿತ್ರಗಳಲ್ಲಿ ನಟಿಸುವಾಗಲೂ ಇಲ್ಲದಿರುವಾಗಲೂ ಮಮತಾ ಕುಲಕರ್ಣಿ ಸದಾ ವಿವಾದಗಳಿಗೆ ತನತ್ತಾಗುತ್ತಿದ್ದರೂ. ಬಾಲಿವಡ್‌ ನಿಂದ ದೂರವಾಗಿದ್ದರೂ ಮಮತಾರನ್ನು ವಿವಾದಗಳು ಬೆನ್ನುಬಿಟ್ಟಿಲ್ಲ.

ನಟಿಸುವ ಕಾಲದಲ್ಲಿ ಮಮತಾರಷ್ಟು ಬೋಲ್ಡ್‌ ನಟಿಯನ್ನು ಬಾಲಿವುಡ್‌ ಕಂಡಿರಲಿಲ್ಲ. ನಡುಪಿನ ಮೇಲೆ ವೈರಾಗ್ಯ ಬಂದಿರುವಂತೆ ತೆರೆ ಮೇಲೆ ಬಿಂದಾಸ್‌ ಆಡಿ ಕಾಣಿಸಿಕೊಳ್ಳುತ್ತಿದ್ದರು ಮಮತಾ. ಅಂತಾರಾಷ್ಟ್ರೀಯ ಮಾಹಕ ವಸ್ತು ಸಾಗಾಟಗಾರನನ್ನು ಮದುವೆಯಾಗಿರುವ ಮಮತಾ ಈ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ.

error: Content is protected !!
Scroll to Top