ಆಗಸ್ಟ್‌ ಮೊದಲ ವಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

-300 ಕೋ.ರೂ. ಖರ್ಚಿನ ಮಂದಿರ

-ಸಿಎಸ್‌ ಆರ್‌ ಫಂಡ್‌ ಮೂಇಕ ಹಣ ಸಂಗ್ರಹ

-ಒಬ್ಬ ವ್ಯಕ್ತಿಯಿಂದ 10 ರೂ., ಒಂದು ಮನೆಯಿಂದ 100 ರೂ.ಸಂಗ್ರಹ

ಉಡುಪಿ: ಹಿಂದು ಸಂಘಟನೆಗಳು ದಶಕಗಳ ಕಾಲ ನಡೆಸಿದ ಫಲ ನೀಡುವ ಗಳಿಗೆ ಕೂಡಿ ಬಂದಿದೆ.ಹಿಂದುಗಳು ಮರ್ಯಾದಾ ಪುರುಷೋತ್ತಮನೆಂದು ಆರಾಧಿಸುವ ರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಿಸಲು ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ಮುಹೂರ್ತ ನಿಗದಿಯಾಗಿದ್ದು ಅಂದೇ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. 

ರಾಮಮಂದಿರ ನಿರ್ಮಾಣ ಸಂಬಂಧ ಟ್ರಸ್ಟಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ನಂತರ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂದಿರ ನಿರ್ಮಾಣ ಮೊತ್ತದ ಕ್ರೋಢಿಕರಣದ ಬಗ್ಗೆ ಚರ್ಚೆಯಾಯಿತು. 

ಇನ್ನು ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಇದೇ ವೇಳೆ ಇನ್ನುಳಿದ 70 ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅವಶ್ಯಕತೆ ಇದೆ ಎಂದರು. 

ಎಲ್ ಅಂಡ್ ಟಿ ಕಂಪನಿಯ ಮೂಲಕ ಮಂದಿರದ ನಿರ್ಮಾಣ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಸಿಎಸ್ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡಲಾಗುವುದು. ಪ್ರತೀ ವ್ಯಕ್ತಿಯ ಮೂಲಕ ಹತ್ತು ರುಪಾಯಿ ಅಂತೆ ಒಂದು ಮನೆಯಿಂದ ನೂರು ರುಪಾಯಿ ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ನವೆಂಬರ್ 25ರಿಂದ ಡಿಸೆಂಬರ್ 25ರವರೆಗೆ ವ್ಯಾಪಕ ಆಂದೋಲನ ನಡೆಯಲಿದೆ ಎಂದರು. 









































error: Content is protected !!
Scroll to Top