ಜೈಪುರ : ಕಳೆದ ಮೂರು ದಿನಗಳಿಂದ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ರಾಜಸ್ಥಾನ ರಾಜಕೀಯ ಅಸ್ಥಿರತೆ ಇಂದು ಹೊಸದೊಂದು ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ವಿರುದ್ಧ ಬಂಡೆದಿದ್ದ ಯುವ ನಾಯಕ ಸಚಿನ್ ಪೈಲಟ್ ಹಾಗೂ ಇತರ ಮೂವರು ಮಂತ್ರಿಗಳನ್ನು ಇಂದು ಸಚಿವ ಸಂಪುಟದಿಂದ ಕೈಬಿಡಲಾಗಿದೆ.
ಸೋಮವಾರ ಜೈಪುರದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪೈಲಟ್ ಭಾಗವಹಿಸಿರಲಿಲ್ಲ. ಈ ಸಭೆಯಲ್ಲಿ ಬಂಡೆದ್ದಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿತ್ತು.ಬಂಡೆದ್ದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದರಿಂದ ತಪ್ಪು ಸಂದೇಶ ರವಾನೆಅಗುತ್ತದೆ ಎಂದು ಈ ಕ್ರಮವನ್ನು ಸರಕಾರ ಸಮರ್ಥಿಸಿಕೊಂಡಿದೆ.
ಬಹಳ ಭಾರವಾದ ಹೃದಯದಿಂದ ಈ ಕಠಿಣ ಕ್ರಮ ಕೈಗೊಳ್ಳಬೇಕಾಯಿತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.