ಬಿಜೆಪಿಯಿಂದ ಸರಕಾರ ಪತನಕ್ಕೆ ಯತ್ನ-ಗೆಹ್ಲೂಟ್
ಮಧ್ಯ ಪ್ರದೇಶದ ಬಳಿಕ ಬಿಜೆಪಿ ಈಗ ರಾಜಸ್ಥಾನ ರಾಜ್ಯದ ಮೇಲೆ ಕಣ್ಣಿಟ್ಟಿದೆಯೇ? ನಿನ್ನೆಯಿಂದ ಇಲ್ಲಿನ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಹೀಗೊಂದು ಅನುಮಾನವನ್ನು ಸೃಷ್ಟಿಸಿವೆ.
ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮೂಲಕ ಸರಕಾರ ಪತನಗೊಳಿಸುವ ಪ್ರಯತ್ನದಲ್ಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಆರೋಪಿಸಿದ್ದಾರೆ.ಕಾಂಗ್ರೆಸ್ನ ಯುವ ನಾಯಕ ಸಚಿನ್ ಪೈಲಟ್ ಕೆಲವು ಶಾಸಕರೊಂದಿಗೆ ದಿಲ್ಲಿಗೆ ಹೋಗಿರುವುದು ಔ ಆರೋಪವನ್ನು ಪುಷ್ಟೀಕರಿಸಿದೆ.