ಗೋಲ್ಡ್‌ ಕ್ವೀನ್‌ ಸ್ವಪ್ನಾ ಸುರೇಶ್‌ ಬೆಂಗಳೂರಿನಲ್ಲಿ ಎನ್‌ಐಎ ಬಲೆಗೆ

0

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರಯವ ಹಾಗೂ ಕೇರಳದ ರಾಜಕೀಯದಲ್ಲಿ ಪ್ರಚಂಡ ಬಿರುಗಾಳಿ ಬೀಸಲು ಕಾರಣವಾಗಿರುವ ಗಲ್ಫ್‌ನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಅವರನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ವಪ್ನಾ ಸುರೇಶ್‌ ಬೆಂಗಳೂರಿನ ಸಂಬಂಧಿಯೊಬ್ಬರ ಮನೆಯಲ್ಲಿ ಕುಟುಂಬ ಸಹಿತ ತಲೆ ಮರೆಸಿಕೊಂಡಿದ್ದಳು. ಕೇಂದ್ರ ಸರಕಾರ ತನಿಖೆಯನ್ನು ಎನ್‌ಐಎಗೆ ವಹಿಸಿತ್ತು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ರಾತ್ರಿ 7 ಗಂಟೆಯ ಸುಮಾರಿಗೆ ಸ್ವಪ್ನಾ ಸುರೇಶ್‌ಳನ್ನು ಬಂಧಿಸಿ ಆಕೆಯ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಕೇರಳದ ಆಡಳಿತ ಪಕ್ಷದ ಕೆಲವು ನಾಯಕರು, ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಿರುವನಂತಪುರದಲ್ಲಿರುವ ಅರಬ್‌ ಎಮಿರೇಟ್ಸ್‌ ಕಾನ್ಸುಲೇಟ್‌ಗೆ ಅರಬ್‌ ಏರ್‌ವೇಸ್‌ ಮೂಲಕ ಬಂದಿದ್ದ ಪಾರ್ಸೆಲ್‌ ಒಂದರಲ್ಲಿ 13 ಕೋಟಿ ರೂ. ಮೌಲ್ಯದ 31 ಕೆ.ಜಿ. ಚಿನ್ನ ಕಳ್ಳಸಾಗಣೆಯಾಗಿ ಬಂದಿತ್ತು.

ಈ ಕೃತ್ಯ ಸಂಬಂಧ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಹಾಗೂ ಸರಿತ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಯುಎಇ ದೂತಾವಾಸ ಕಚೇರಿಯಲ್ಲಿ, ಕೇರಳ ಸರಕಾರದಲ್ಲಿ ಉನ್ನತ ಅಧಿಕಾರಿಗಳ ಜತೆಗೆ ಆಕೆ ಟೆಲಿಫೋನ್‌ ಸಂಪರ್ಕ ಹೊಂದಿರುವ ಮಾಹಿತಿಗಳು ಲಭ್ಯವಾಗಿತ್ತು. 

Previous articleರಾಜಸ್ಥಾನದಲ್ಲಿ ಗಂಭೀರ ರಾಜಕೀಯ ಬಿಕ್ಕಟ್ಟು
Next articleಹಾರ್ದಿಕ್ ಪಟೇಲ್ ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ

LEAVE A REPLY

Please enter your comment!
Please enter your name here