1400 ಕೋಟಿ ರೂಪಾಯಿ ಅವ್ಯವಹಾರ?
ವಾಸುದೇವ ಮಯ್ಯ ಕಾರಿನಲ್ಲಿ ಬ್ಲಾಕ್ ಅಂಡ್ ವೈಟ್ ಮದ್ಯದ ಬಾಟಲಿ ಪತ್ತೆ. ನೀರಿನಲ್ಲಿ 40ಕ್ಕೂ ಹೆಚ್ಚು ANXIT ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆ .
ಬೆಂಗಳೂರು : ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣ ಪ್ರಕರಣದ ಪ್ರಮುಖ ಆರೋಪಿ, ಬ್ಯಾಂಕ್ನ ಮಾಜಿ ಸಿಇಒ ಹಾಗೂ ಹಾಲಿ ಸೂಪರ್ ವೈಸರ್ ವಾಸುದೇವ್ ಮಯ್ಯ ಆತ್ಮಹತ್ಯೆ ಪ್ರಕರಣ ರಾಜ್ಯದಾದ್ಯಂತ ಬಾರೀ ಕುತೂಹಕ್ಕೆ ಕಾರಣವಾಗಿದೆ. ಜೊತೆಗೆ ಆತ್ಮಹತ್ಯೆ ಸುತ್ತ ಅನುಮಾನಗಳೂ ಹುತ್ತಗಟ್ಟಿವೆ.
ವಾಸುದೇವ ಮಯ್ಯ, ಪೂರ್ಣ ಪ್ರಜ್ಞಾ ಲೇಔಟ್ ನ ತಮ್ಮ ಮಗಳ ಜೊತೆಗೆ ವಾಸವಾಗಿದ್ದರು. ಸೋಮವಾರ ಸಂಜೆ ಮನೆ ಮುಂದೆ ಕಾರಿನಲ್ಲಿ ಕುಳಿತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕಲಸಂದ್ರದಲ್ಲಿ ಘಟನೆ ನಡೆದಿದೆ.
ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರಿನಲ್ಲಿ ಕೆಲ ದಾಖಲೆಗಳು ಸಿಕ್ಕಿವೆ. ಕುಟುಂಬದ ಸಮ್ಮಖದಲ್ಲಿ ಎಫ್ ಎಸ್ ಎಲ್ ಮಾಡಿದ್ದೇವೆ. ಡೆತ್ ನೋಟ್ ಸೇರಿ ದಾಖಲೆಗಳು ಸಿಕ್ಕಿವೆ. ಅವರ ಮನೆಯವ್ರು ಸಹ ಅದರ ಪೋಟೋ ತೆಗೆದುಕೊಂಡಿದ್ದಾರೆ. ಅದರಲ್ಲಿ ಏನಿದೆ ಅನ್ನೋದು ತನಿಖೆ ಆಗಬೇಕು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಹೇಳಿದ್ದಾರೆ.
ಸಾವಿನ ಸುತ್ತ ಅನುಮಾನ
ವಾಸುದೇವ ಮಯ್ಯ ಆತ್ಮಹತ್ಯೆಯ ಸುತ್ತ ಹಲವು ಅನುಮಾನಗಳಿವೆ. ಅವರು ಮೃತಪಟ್ಟ ಕಾರಿನಲ್ಲಿ ಡೆತ್ ನೋಟ್ ಸೇರಿ ಸುಮಾರು 12 ಪುಟಗಳ ದಾಖಲೆ ಪತ್ತೆ ಆಗಿದೆ. ಆ ದಾಖಲೆಗಳಲ್ಲಿ ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನ ಅವ್ಯವಹಾರದ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ. ವಾಸುದೇವ ಮಯ್ಯ ಜೊತೆ ಬ್ಯಾಂಕ್ ವ್ಯವಹಾರ ಹಾಗೂ ಕೋಟ್ಯಾಂತರ ಹಣ ವಹಿವಾಟು ನಡೆಸಿದ್ದ ವ್ಯಕ್ತಿಗಳ ಹೆಸರು ಬರೆದಿರುವ ಶಂಕೆ ಇದೆ.
ಸಾವಿಗೂ ಮುನ್ನ ವೈನ್ ಸೇವನೆ
ಪೊಲೀಸರಿಗೆ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ವಾಸುದೇವ ಅವರು ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಆಲ್ಟೋ ಕಾರ್ನಲ್ಲಿ ಪೂರ್ಣ ಪ್ರಜ್ಞಾ ಲೇಔಟ್ಗೆ ಬಂದಿದ್ದರು. ಅದೇ ರಸ್ತೆಯಲ್ಲಿ ಒಂದು ಗಂಟೆಯ ಕಾಲ ವಾಕ್ ಮಾಡಿದ್ದರಂತೆ. ನಂತರ ಅವರು ಕಾರಿನಲ್ಲಿ ಬ್ಲಾಕ್ ಅಂಡ್ ವೈಟ್ ಮದ್ಯ ಸೇವನೆ ಮಾಡಿದ್ದರು. ಬಾಟಲಿಯನ್ನು ಕಾರಿನಲ್ಲೇ ಬಿಸಾಡಿದ್ದರು. ನಂತರ ನೀರಿನಲ್ಲಿ 40ಕ್ಕೂ ಹೆಚ್ಚು ANXIT ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮಾನಸಿಕ ಖಿನ್ನತೆಗೆ ತೆಗೆದುಕೊಳ್ಳುವ ANXIT ಮಾತ್ರೆಗಳನ್ನು ಸೇವನೆ ಮಾಡುತ್ತಾರೆ.
ಸ್ಥಳೀಯರಿಗೆ ಬಂದಿತ್ತು ಅನುಮಾನ
ವಾಕ್ ಮಾಡಿದ ನಂತರ ವಾಸುದೇವ ಅವರು ಕಾರಿನಲ್ಲೇ ಕುಳಿತಿದ್ದರು. ಎಷ್ಟೇ ಹೊತ್ತಾದರೂ ಅವರು ವಾಪಾಸು ಬಂದಿಲ್ಲ. ಅನುಮಾನಗೊಂಡ ಸ್ಥಳೀಯರು ಅಲ್ಲಿ ಹಾವಿನ ಕಾಟ ಬೇರೆ ಹೆಚ್ಚಿದೆ ಎಂದು ಹೇಳುತ್ತ ಕಾರಿನ ಬಳಿ ಹೋಗಿದ್ದರು. ಈ ವೇಳೆ ವಾಸುದೇವಯ್ಯ ಮಲಗಿರುವ ರೀತಿ ಅನುಮಾನಕ್ಕೆ ಕಾರಣವಾಗಿತ್ತು.ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಏನಿದು ಹಗರಣ?
ಈ ಹಿಂದೆ ವಾಸುದೇವ ಮಯ್ಯ ಹಲವು ವರ್ಷಗಳ ಕಾಲ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಸಿಇಒ ಆಗಿದ್ದರು. ಇವರು ಅಧಿಕಾರ ವಹಿಸಿದ ಬಳಿಕ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಜೂನ್ ತಿಂಗಳ 18ರಂದು ದಾಳಿ ನಡೆಸಿದ್ದರು. ಬ್ಯಾಂಕ್ ನ ಕೇಂದ್ರ ಕಚೇರಿ ಸೇರಿದಂತೆ ಐದಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು. ದಾಳಿ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದವು.
ರಾಘವೇಂದ್ರ ಮಯ್ಯ ಸೂಪರ್ ಸೀಡ್ ಆಗೋವರೆಗೂ ಅವ್ಯವಹಾರ ನಡೆದಿದೆ ಎನ್ನುವ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು ಎನ್ನಲಾಗಿದೆ. ಸಾಲ ನೀಡುವಾಗ ಆರ್ಬಿಐ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಯಾವುದೇ ದಾಖಲೆ ಇಲ್ಲದ 140 ರಿಂದ 150 ಕೋಟಿಯಷ್ಟು ಸಾಲ ಕೊಟ್ಟಿದ್ದರು ಎನ್ನಲಾಗಿದೆ. ಸದ್ಯ ಎಸಿಬಿಯಿಂದ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿದೆ. ಸಿಐಡಿಗೆ ಪ್ರಕರಣ ವರ್ಗಾವಣೆಯಾದ ಬಳಿಕ ವಾಸುದೇವ ಮಯ್ಯ ತಲೆಮರೆಸಿಕೊಂಡಿದ್ದರು.