ದಿನೇಶ್ ಗುಂಡೂರಾವ್​​​​ ಮನೆಯಲ್ಲಿ ನಾಲ್ವರಿಗೆ ಕೊರೊನಾ

0

ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೋನಾ ಬಂದ ಬೆನ್ನಲ್ಲೇ ದಿನೇಶ್​ ಗುಂಡೂರಾವ್​​ ಕುಟುಂಬವನ್ನು ಕೋವಿಡ್​​-19 ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಇದೀಗ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತನ್ನ ಕೋವಿಡ್​-19 ವರದಿಯೂ ನೆಗಿಟಿವ್​ ಬಂದಿರುವುದಾಗಿ ದಿನೇಶ್ ಗುಂಡೂರಾವ್ ಟ್ವೀಟ್​​ ಮಾಡಿದ್ದಾರೆ.

ಬೆಂಗಳೂರು : ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ದಿನೇಶ್​​ ಗುಂಡೂರಾವ್​​​​ ಅವರಿಗೂ ಮಾರಕ ಕೊರೋನಾ ವೈರಸ್​​ ಬಿಸಿ ತಟ್ಟಿದೆ. ಅವರ  ಗನ್​​​​ಮ್ಯಾನ್​​ ಸೇರಿದಂತೆ ನಾಲ್ವರು ಸಿಬ್ಬಂದಿಗೆ ಕೋವಿಡ್​​-19 ಸೋಂಕು ತಗುಲಿದೆ

ಈ ಸಂಬಂಧ ಟ್ವೀಟ್​ ಮಾಡಿರುವ ದಿನೇಶ್​​ ಗುಂಡೂರಾವ್​​​, ಪೊಲೀಸ್​​ ಸಿಬ್ಬಂದಿಯೊಬ್ಬರಿಗೆ ಕೊರೋನಾ ಧೃಡಪಟ್ಟ ನಂತರ ನಮ್ಮ ಗನ್​​ಮ್ಯಾನ್​​​ ಸೇರಿದಂತೆ ಇನ್ನಿಬ್ಬರಿಗೆ ಮನೆಯಲ್ಲಿ ಸೋಂಕು ತಗುಲಿದೆ ಎಂದು ಸ್ಪಷ್ಟನೆ ನೀಡಿದ್ಧಾರೆ.

ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಬಂದ ಬೆನ್ನಲ್ಲೇ ದಿನೇಶ್​ ಗುಂಡೂರಾವ್​​ ಕುಂಟುಬವನ್ನು ಕೋವಿಡ್​​-19 ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಇದೀಗ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತನ್ನ ಕೋವಿಡ್​-19 ವರದಿಯೂ ನೆಗಿಟಿವ್​ ಬಂದಿರುವುದಾಗಿ ದಿನೇಶ್ ಗುಂಡೂರಾವ್ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

Previous articleವಾಸುದೇವ ಮಯ್ಯ ಸಾವಿನ ಸುತ್ತ ಅನುಮಾನದ ಹುತ್ತ
Next articleಕಾಶ್ಮೀರದಲ್ಲಿ ಮತ್ತೆ ಎನೌಕೌಂಟರ್‌ : ಯೋಧ ಹುತಾತ್ಮ, ಉಗ್ರ ಹತ

LEAVE A REPLY

Please enter your comment!
Please enter your name here