ಬೆಂಗಳೂರು : ರಾಜ್ಯದಲ್ಲಿ ಕೊರೊನಾ ತಾಂಡವ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೊಜಾ ನಿರ್ವಹಣೆಗೆಂದೇ ಪ್ರತ್ಯೇಕ ತಂಡಗಳನ್ನು ರಚಿಸಿದೆ.
14 ತಂಡ ರಚಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರತಿ ಜಿಲ್ಲೆಯಲ್ಲೂ ತಂಡಗಳು ಕಾರ್ಯನಿರ್ವಹಣೆ ಮಾಡಲಿವೆ. ಕೊರೊನಾ ಚಿಕಿತ್ಸಾ ಕೇಂದ್ರಗಳಿಗೂ ತಂಡ ರಚನೆ ಮಾಡಲಾಗಿದೆ. ತಂಡಗಳಿಗೆ ಚಿಕಿತ್ಸಾ ಕೇಂದ್ರ ಸ್ಥಾಪನೆಯ ಹೊಣೆ ನೀಡಲಾಗಿದೆ. ಸಂಪರ್ಕಿತರ ಪತ್ತೆ, ಪರೀಕ್ಷೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಸೋಂಕಿತರ ಮೃತರ ಅಂತ್ಯ ಸಂಸ್ಕಾರಕ್ಕೂ ತಂಡ ರಚನೆಯಾಗಿದೆ.