ಜಿಲ್ಲಾಡಳಿತದಿಂದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ
ಕಾರ್ಕಳ : ಜಿಲ್ಲಾಡಳಿತದ ಆದೇಶದಂತೆ ನಿರ್ಮಿತ ಕೇಂದ್ರ ಶುಕ್ರವಾರ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ ಸ್ವಚ್ಛತಾ ಕಾರ್ಯ ಕೈಗೊಂಡಿದೆ. 2023ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ ಬಳಿಕ ರಾಜಕೀಯ ಮೇಲಾಟಕ್ಕೆ ಬಲಿಯಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಪರಿಣಾಮವಾಗಿ ಥೀಮ್ ಪಾರ್ಕ್ ಆವರಣದಲ್ಲಿ ಹುಲ್ಲು, ಪೊದೆಗಳು ತುಂಬಿ ಥೀಮ್ ಪಾರ್ಕ್ ಪಾಳುಬಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಥೀಮ್ ಪಾರ್ಕ್‌ನಲ್ಲಿ ಕಟ್ಟಡದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆ ಕಿತ್ತು ಹೊತ್ತೊಯ್ದಿದ್ದರು. […]
ಜಿಲ್ಲಾಡಳಿತದಿಂದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ Read More »










