• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ಬೈಕ್‌ಗಳ ಡಿಕ್ಕಿ – ದಂಪತಿಗೆ ಗಾಯ

ಕಾರ್ಕಳ : ಬೈಕ್‌ಗಳ ನಡುವೆ ಡಿಕ್ಕಿಯಾಗಿ ದಂಪತಿ ಗಾಯಗೊಂಡಿರುವ ಘಟನೆ ಮೇ 8ರಂದು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಹೆರ್ಮುಂಡೆ ಗ್ರಾಮದ ಜಾನ್‌ ಡಿಸೋಜಾ ಹಾಗೂ ಅವರ ಪತ್ನಿ ಅಂಜೆಲಿನ್‌ ಗ್ಲ್ಯಾಡಿಸ್‌ ಗುರುವಾರ ರಾತ್ರಿ ಅಜೆಕಾರಿನಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಹೋಗಿ ಬೈಕ್‌ನಲ್ಲಿ ಹಿಂದಿರುಗುವಾಗ ಮರ್ಣೆ ಗ್ರಾಮದ ಬೊಂಡು ಕುಮೇರಿ ಶಾಲೆಯ ಹತ್ತಿರ ಅಂಡಾರು ಕಡೆಯಿಂದ ಅಜೆಕಾರು ಕಡೆಗೆ ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಜಾನ್‌ ಡಿಸೋಜಾ ಹಾಗೂ ಅಂಜೆಲಿನ್‌ ಗ್ಲ್ಯಾಡಿಸ್‌ ಇಬ್ಬರೂ ಗಾಯಗೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌

ಬೈಕ್‌ಗಳ ಡಿಕ್ಕಿ – ದಂಪತಿಗೆ ಗಾಯ Read More »

ಬೈಕ್‌ಗೆ ಪಿಕಪ್ ಡಿಕ್ಕಿ – ಸವಾರರಿಗೆ ಗಾಯ

ಕಾರ್ಕಳ : ಬೈಕ್‌ಗೆ ಪಿಕಪ್‌ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಆನೆಕೆರೆಯಲ್ಲಿ ಏ. 28ರಂದು ಸಂಭವಿಸಿದೆ. ಸಾಣೂರಿನ ಸುಶಾಂತ್‌ ಬೈಕಿನಲ್ಲಿ ತಮ್ಮ ಪ್ರಶಾಂತ್‌ ಎಂಬುವವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಸಬಾ ಗ್ರಾಮದ ಆನೆಕೆರೆ ಮಸೀದಿ ಬಳಿ ಮೂರು ಮಾರ್ಗ ಕಡೆಯಿಂದ ಆನೆಕೆರೆ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ, ಮೂರು ಮಾರ್ಗ ಕಡೆಯಿಂದ ಆನೆಕೆರೆ ಕಡೆಗೆ ಬರುತ್ತಿದ್ದ ಪಿಕಪ್‌ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ಬೈಕ್‌ ಸಮೇತ ನೆಲಕ್ಕೆ ಬಿದ್ದು ಗಾಯಗೊಂಡಿದ್ದು,

ಬೈಕ್‌ಗೆ ಪಿಕಪ್ ಡಿಕ್ಕಿ – ಸವಾರರಿಗೆ ಗಾಯ Read More »

ಪಿಕಪ್‌ ಡಿಕ್ಕಿ : ಕಾರು ಚಾಲಕನಿಗೆ ಗಾಯ

ಕಾರ್ಕಳ : ಕಾರು ಮತ್ತು ಪಿಕಪ್‌ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಆಸ್ಪತ್ರೆ ದಾಖಲಾದ ಘಟನೆ ಎ. 24ರಂದು ಕಾರ್ಕಳ ಹೆಬ್ರಿ ಮುಖ್ಯರಸ್ತೆಯ ಹಿರ್ಗಾನ ಚಿಕ್ಕಲ್‌ ಬೆಟ್ಟು ಕ್ರಾಸ್‌ನಲ್ಲಿ ಸಂಭವಿಸಿದೆ. ಅಜೆಕಾರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಇಕೋ ಕಾರು ಮತ್ತು ಜೋಡುರಸ್ತೆಯಿಂದ ಅಜೆಕಾರು ಕಡೆಗೆ ಸಾಗುತ್ತಿದ್ದ ಕೋಳಿ ಸಾಗಾಟದ ಪಿಕಪ್‌ ವಾಹನದ ನಡುವೆ ಡಿಕ್ಕಿಯಾಗಿದ್ದು ಪರಿಣಾಮವಾಗಿ ಕಾರು ಚಾಲಕ ಎಳ್ಳಾರೆ ನಿವಾಸಿ ಶ್ರೀನಿವಾಸ ಭಟ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಟಿಎಂಎಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ

ಪಿಕಪ್‌ ಡಿಕ್ಕಿ : ಕಾರು ಚಾಲಕನಿಗೆ ಗಾಯ Read More »

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ‌ ಚಿಕಿತ್ಸೆ ಫಲಿಸದೆ ಸಾವು

ಕಾರ್ಕಳ : ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಿಸದೆ‌ ಸಾವನ್ನಪ್ಪಿದ ಘಟನೆ ಕಾಂತಾವರದಲ್ಲಿ‌ ಸಂಭವಿಸಿದೆ. ಚಂದ್ರಶೇಖರ (55) ಮೃತದುರ್ದೈವಿ.‌ ಇವರು ಎ. 13ರಂದು ಕಾಂತಾವರ ಗ್ರಾಮದ ಕವೈಲ್‌ ದರ್ಖಾಸು ಮನೆ ಕಿರಣ್‌ರವರ ಜಾಗದಲ್ಲಿದ್ದ ಮಾವಿನ ಮರದ ಗೆಲ್ಲು ಕಡಿಯುತ್ತಿರುವಾಗ ಆಯತಪ್ಪಿ ಮರದಿಂದ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಂದ್ರಶೇಖರ ಚಿಕಿತ್ಸೆಗೆ ಸ್ಪಂದಿಸದೆ ಎ. 21 ರಂದು

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ‌ ಚಿಕಿತ್ಸೆ ಫಲಿಸದೆ ಸಾವು Read More »

ಮರಕ್ಕೆ ಬೈಕ್ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಬೆಳ್ತಂಗಡಿ : ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯ ಪುರುಷಗುಡ್ಡೆಯಲ್ಲಿ ನಡೆದಿದೆ. ಮೃತರನ್ನು ಬೆಳ್ಮಣ್‌ ನಿವಾಸಿಗಳಾದ ಪ್ರಶಾಂತ್‌ ಮತ್ತು ದಿನೇಶ್‌ ಎಂದು ಗುರುತಿಸಲಾಗಿದೆ.ಕಳೆದ ತಡರಾತ್ರಿ ವೇಗವಾಗಿ ಚಲಾಯಿಸುತ್ತಿದ್ದ ಬೈಕ್‌ ಸವಾರರು ತಿರುವಿನಲ್ಲಿ ರಸ್ತೆ ಕಾಣದೇ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ, ಅತಿ ವೇಗದ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಕ್ಕೆ ಬೈಕ್ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲೇ ಸಾವು Read More »

ಮಾಳ : ಲಾರಿ ಪಲ್ಟಿ – 11 ಮಂದಿಗೆ ಗಾಯ

ಕಾರ್ಕಳ : ಲಾರಿ ಪಲ್ಟಿಯಾಗಿ ಚಾಲಕ ಸೇರಿದಂತೆ 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ‌ಎ. 7ರಂದು ಮುಂಜಾನೆ ಮಾಳದಲ್ಲಿ ಸಂಭವಿಸಿದೆ. ತೆಲಂಗಾಣದಿಂದ ಮಂಗಳೂರಿಗೆ ಪ್ಲಾಸ್ಟಿಕ್‌ ಐಟಂಗಳನ್ನು ಸಾಗಿಸುತ್ತಿದ್ದ ಲಾರಿ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಮಾಳ ಎಸ್‌.ಕೆ. ಬಾರ್ಡರ್‌ ಸಮೀಪ ಪಲ್ಟಿಯಾಗಿದೆ. ಪರಿಣಾಮವಾಗಿ ಲಾರಿಯಲ್ಲಿದ್ದ 11 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ವಾಹನವೊಂದರಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ

ಮಾಳ : ಲಾರಿ ಪಲ್ಟಿ – 11 ಮಂದಿಗೆ ಗಾಯ Read More »

ಕಾರು ಡಿಕ್ಕಿ – ವಿದ್ಯಾರ್ಥಿ ಮೃತ್ಯು

ಉಡುಪಿ : ಕಾರು ಡಿಕ್ಕಿ ಹೊಡೆದು ಶಾಲಾವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಮುಂಭಾಗ ಡಿವೈಡರ್ ಬಳಿ ರಾ.ಹೆ.ಯಲ್ಲಿ ಎ.1ರಂದು ಸಂಭವಿಸಿದೆ.ಸ್ಥಳೀಯ ಶಾಲೆಯ 6ನೇ ತರಗತಿಯ ವಂಶ್ ಎಸ್. ಶೆಟ್ಟಿ ಮೃತ ದುರ್ದೈವಿ. ವಂಶ್ ಬೆಳಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹೆದ್ದಾರಿ ದಾಟುತ್ತಿದ್ದ ವೇಳೆ ಕುಂದಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕಾರು ಡಿಕ್ಕಿ – ವಿದ್ಯಾರ್ಥಿ ಮೃತ್ಯು Read More »

ಅಜೆಕಾರು: ಬೈಕ್‌ ಡಿಕ್ಕಿ ಹೊಡೆದು ಮಹಿಳೆಗೆ ಗಂಭೀರ ಗಾಯ

ಅಜೆಕಾರು : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಫೆ.27ರಂದು ಸಂಜೆ 7.15ರ ವೇಳೆಗೆ ಅಜೆಕಾರು ಕೈಕಂಬ ಜಂಕ್ಷನ್‌ ಬಳಿ ಸಂಭವಿಸಿದೆ. ಮರ್ಣೆ ಗ್ರಾಮದ ಜಯಲಕ್ಷ್ಮೀ ಗಾಯಗೊಂಡ ಮಹಿಳೆ. ಅಜೆಕಾರು ಪೇಟೆ ಕಡೆಯಿಂದ ಬಂದ ಬೈಕ್‌ ಹಿಂದಿನಿಂದ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಜಯಲಕ್ಷ್ಮಿ ಅವರನ್ನು ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಒಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಅಜೆಕಾರು: ಬೈಕ್‌ ಡಿಕ್ಕಿ ಹೊಡೆದು ಮಹಿಳೆಗೆ ಗಂಭೀರ ಗಾಯ Read More »

ನಲ್ಲೂರು : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ

ಕಾರ್ಕಳ : ನಲ್ಲೂರು ಗ್ರಾಮದ ಪಾಜೆಗುಡ್ಡೆ ಎಂಬಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಬ್ರಹ್ಮಾವರದ ಆರೂರು ಗ್ರಾಮದ ದಿಲೀಪ್‌ (34) ಎಂಬವರು ಗಾಯಗೊಂಡ ಘಟನೆ ಮಾ.3ರಂದು ಸಂಭವಿಸಿದೆ. ದಿಲೀಪ್‌ ಸಂಜೆ 6.15ರ ಹೊತ್ತಿಗೆ ಕಾರ್ಕಳ ಕಡೆಗೆ ಬೈಕ್‌ನಲ್ಲಿ ಬರುತ್ತಿರುವಾಗ ಎದುರಿನಿಂದ ಅತಿವೇಗವಾಗಿ ಬಂದ ಕಾರು ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವಾಗ ಬಲಭಾಗಕ್ಕೆ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ದಿಲೀಪ್‌ ಬೈಕ್‌ ಸಮೇತ ರಸ್ತೆಗೆ ಬಿದ್ದು ಕೈ, ಕಾಲಿಗೆ ಗಾಯವಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ

ನಲ್ಲೂರು : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ Read More »

ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೀನಿನ ಅಂಗಡಿಗೆ ನುಗ್ಗಿದ ಕಾರು

ಕಾರ್ಕಳ : ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರೊಂದು ಮೀನಿನ ಅಂಗಡಿಗೆ ನುಗ್ಗಿದ ಘಟನೆ ಮಾ. 1ರ ರಾತ್ರಿ ಅತ್ತೂರು ಕ್ರಾಸ್‌ನಲ್ಲಿ ಸಂಭವಿಸಿದೆ. ಮುಂಭಾಗದಲ್ಲಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮೀನಿನ ಅಂಗಡಿಗೆ ನುಗ್ಗಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಜಖಂಗೊಂಡಿದೆ. ಅಲ್ಲದೆ ಇದೇ ವೇಳೆ ನಿರ್ಲಕ್ಷತನದಿಂದ ಬರುತ್ತಿದ್ದ ಬೈಕ್‌ ಸವಾರ ಬೈಕ್‌ ಸಮೇತ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾನೆ.

ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೀನಿನ ಅಂಗಡಿಗೆ ನುಗ್ಗಿದ ಕಾರು Read More »

error: Content is protected !!
Scroll to Top