• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ಮಂಗಳೂರು : ಭೀಕರ ರಸ್ತೆ ಅಪಘಾತ – ಎನ್‌ಎಸ್‌ಯುಐ ಮುಖಂಡ ಸೇರಿ ಇಬ್ಬರು ಮೃತ್ಯು

ಮಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ. ಮೃತರನ್ನು ಕಾರು ಚಾಲಕ ಕದ್ರಿ ನಿವಾಸಿ ಅಮನ್ ರಾವ್ ಮತ್ತು ಚಾಲಕನ ಹಿಂದಿನ ಸೀಟಿನಲ್ಲಿದ್ದ ಓಂಶ್ರೀ ಪೂಜಾರಿ ಎಂದು ಗುರುತಿಸಲಾಗಿದೆ. ಐವರು ಯುವಕರಿದ್ದ ಫೋಕ್ಸ್‌ ವೇಗನ್‌ ವರ್ಟಸ್‌ ಕಾರು ತಲಪಾಡಿಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಾತ್ರಿ ಸುಮಾರು 2.30ರ ವೇಳೆಗೆ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗಿದ್ದ

ಮಂಗಳೂರು : ಭೀಕರ ರಸ್ತೆ ಅಪಘಾತ – ಎನ್‌ಎಸ್‌ಯುಐ ಮುಖಂಡ ಸೇರಿ ಇಬ್ಬರು ಮೃತ್ಯು Read More »

ನಿಟ್ಟೆ : ಓವರ್‌ ಟೇಕ್‌ ಮಾಡುವ ಭರದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಮತ್ತು ಬೈಕ್‌ಗೆ ಕಾರು ಡಿಕ್ಕಿ – ಅಪಘಾತ ಮಾಡಿದವ ವಾಹನ ಸಮೇತ ಪರಾರಿ

ಕಾರ್ಕಳ : ಓವರ್‌ ಟೇಕ್‌ ಮಾಡುವ ಭರದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಮತ್ತು ಅದೇ ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ಉಪಚರಿಸದೆ ಕಾರು ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾದ ಘಟನೆ ಜೂ. 14ರಂದು ನಿಟ್ಟೆಯಲ್ಲಿ ಸಂಭವಿಸಿದೆ. ದೂಪದಕಟ್ಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ (KA-19-MN-1816) ಕಾರು ಅದೇ ದಾರಿಯಲ್ಲಿ ಸಾಗುತ್ತಿದ್ದ ಬೈಕೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ

ನಿಟ್ಟೆ : ಓವರ್‌ ಟೇಕ್‌ ಮಾಡುವ ಭರದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಮತ್ತು ಬೈಕ್‌ಗೆ ಕಾರು ಡಿಕ್ಕಿ – ಅಪಘಾತ ಮಾಡಿದವ ವಾಹನ ಸಮೇತ ಪರಾರಿ Read More »

ಹೆಬ್ರಿ : ಬಸ್‌ ಡಿಕ್ಕಿ – ಪಾದಚಾರಿ ಸಾವು

ಹೆಬ್ರಿ : ಬಸ್‌ ಡಿಕ್ಕಿಯಾಗಿ ಪಾದಚಾರಿಯೋರ್ವರು ಸಾವನಪ್ಪಿದ ಘಟನೆ ಜೂ. 11ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಶೋಬಿತ್‌ KA-14-B-4118) ಬಸ್ ಹೆಬ್ರಿ ಜಂಕ್ಷನ್‌ ಕಡೆಯಿಂದ ಪುಟ್‌ ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ಶಂಕರ (71) ಎಂಬವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಶಂಕರ ಅವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಹೆಬ್ರಿ ಹೆಲ್ತ್‌ ಕೇರ್‌ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆಗೆ ಸ್ಪಂದಿಸದೆ ಶಂಕರ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೆಬ್ರಿ : ಬಸ್‌ ಡಿಕ್ಕಿ – ಪಾದಚಾರಿ ಸಾವು Read More »

ಕಾರ್ಕಳ – ಪಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು

ಕಾರ್ಕಳ : ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ರಿಕ್ಷಾ ಮತ್ತು ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ ಜೂ. 12ರ ಬೆಳಿಗ್ಗೆ ನಡೆದಿದೆ.ಕಾರ್ಕಳದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಅಡ್ವೆ ಕಾಂಜಾರಕಟ್ಟೆ ಜಂಕ್ಷನ್‌ ಬಳಿ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ರಿಕ್ಷಾದಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುತ್ತಾರೆ. ತಕ್ಷಣವೇ ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಅಪಘಾತದ ಭೀಕರತೆಗೆ ಎರಡೂ ವಾಹನದ

ಕಾರ್ಕಳ – ಪಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು Read More »

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ – ಆಸ್ಪತ್ರೆ ದಾಖಲು

ಕಾರ್ಕಳ : ರಸ್ತೆ ಬದಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಬೈಕ್‌ ಡಿಕ್ಕಿಯಾಗಿ ಆಸ್ಪತ್ರೆ ದಾಖಲಾದ ಘಟನೆ ಜೂ. 7ರಂದು ಮುಡಾರಿನಲ್ಲಿ ಸಂಭವಿಸಿದೆ. ಮುಡಾರು ಗ್ರಾಮದ ಸುರೇಂದ್ರ ಎಂಬವರು ರಾತ್ರಿ 8.30ಕ್ಕೆ ಆಟೋ ರಿಕ್ಷಾದಿಂದ ಇಳಿದು ರಸ್ತೆ ಬದಿ ನಿಂತಿದ್ದಾಗ ಕೆರ್ವಾಶೆ ಕಡೆಗೆ ವಿಶ್ವನಂದನ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಸುರೇಂದ್ರ ಅವರು ಗಾಯಗೊಂಡಿದ್ದು ಗಾಜ್ರಿಯಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಪಘಾತದಿಂದಾಗಿ ಬೈಕ್‌ ಸವಾರನೂ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ – ಆಸ್ಪತ್ರೆ ದಾಖಲು Read More »

ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ – ಸವಾರರಿಗೆ ಗಾಯ

ಕಾರ್ಕಳ : ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಜೂ. 4ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ದೇವದಾಸ್ ಎಂಬವರು ಪತ್ನಿ ಸುಮಂಗಳ ಅವರೊಂದಿಗೆ ಪಡುಬಿದ್ರೆ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ನಿಟ್ಟೆ ಎಂಬಲ್ಲಿ ಗಜೇಂದ್ರ ಎಂಬವರು ತನ್ನ ಒಮ್ನಿ ಆಂಬ್ಯುಲೆನ್ಸ್ (KA-25-C-5216) ವಾಹನದಲ್ಲಿ ಅತ್ತೂರು ಚರ್ಚ್ ಕಡೆಯಿಂದ ಬರುತ್ತಿರುವಾಗ ದೂಪದಕಟ್ಟೆ ಜಂಕ್ಷನ್‌ನಲ್ಲಿರುವ ವೃತ್ತವನ್ನು ಬಳಸದೇ ವಿರುದ್ಧ ದಿಕ್ಕಿನಿಂದ ಚಲಾಯಿಸಿರುತ್ತಾರೆ. ಆಗ ದೇವದಾಸ್‌ ಅವರ ಬೈಕ್‌ಗೆ ಓಮ್ನಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್‌

ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ – ಸವಾರರಿಗೆ ಗಾಯ Read More »

ನಿಟ್ಟೆ : ಸ್ಕೂಟಿಗೆ ಕಾರು ಡಿಕ್ಕಿ – ಸವಾರೆ ಸ್ಥಳದಲ್ಲೆ ಸಾವು

ಕಾರ್ಕಳ : ಸ್ಕೂಟಿಗೆ ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರೆ ಸ್ಥಳದಲ್ಲೇ ಸಾವನಪ್ಪಿದ‌ ದುರ್ಘಟನೆ ನಿಟ್ಟೆಯಲ್ಲಿ ಜೂ. 4 ರಂದು ಸಂಭವಿಸಿದೆ. ನಿಟ್ಟೆ‌ ಗುಂಡಾಜೆ‌ ನಿವಾಸಿ ಯಶವಂತಿ ಮೃತ ಮಹಿಳೆ. ಯಶವಂತಿ ಅವರು ಕಾರ್ಕಳದಲ್ಲಿ ಕೆಲಸ‌ ಮುಗಿಸಿ ನಿಟ್ಟೆ ಗುಂಡಾಜೆಯತ್ತ ಸಾಗುತ್ತಿರುವಾಗ ನಿಟ್ಟೆಯಲ್ಲಿ ಹಿಂದಿನಿಂದ‌ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.‌ ಪರಿಣಾಮವಾಗಿ ಯಶವಂತಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ನಿಟ್ಟೆ : ಸ್ಕೂಟಿಗೆ ಕಾರು ಡಿಕ್ಕಿ – ಸವಾರೆ ಸ್ಥಳದಲ್ಲೆ ಸಾವು Read More »

ಆನೆಕೆರೆಯಲ್ಲಿ ಚರಂಡಿಗೆ ಬಿದ್ದ ಕಾರು

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ವಾಲಿದ ಘಟನೆ ಮೇ 29ರಂದು ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಸಂಭವಿಸಿದೆ.ಕೊಲ್ಲಾಪುರ ಮೂಲದವರು ಹುಂಬುಚ್ಚದಲ್ಲಿ ಜೈನ ಪವಿತ್ರ ತೀರ್ಥಕ್ಷೇತ್ರಗಳ ದರ್ಶನ ಪಡೆದು ಕಾರ್ಕಳದ ಜೈನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲೆಂದು ಆಗಮಿಸಿದ್ದು, ಆನೆಕೆರೆಯಿಂದ ದಾನಶಾಲೆಯತ್ತ ಸಾಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ವಾಲಿದೆ. ಅದೃಷ್ಟವಶಾತ್‌ ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿ ವಿದ್ಯುತ್‌

ಆನೆಕೆರೆಯಲ್ಲಿ ಚರಂಡಿಗೆ ಬಿದ್ದ ಕಾರು Read More »

ವಾಹನ ತಪಾಸಣೆ ವೇಳೆ ಅಪಘಾತ : ಮೂರು ವರ್ಷದ ಬಾಲಕಿ ಸಾವು – ಮೂವರು ಎಎಸ್‌ಐಗಳು ಸಸ್ಪೆಂಡ್

ಮಂಡ್ಯ : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ 3 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಮಂಡ್ಯದಲ್ಲಿ ಸೋಮವಾರ ನಡೆದಿದೆ. ಮಂಡ್ಯದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ಈ ವೇಳೆ ದುರ್ಘಟನೆ ಸಂಭವಿಸಿದೆ. ಮದ್ದೂರು ತಾಲ್ಲೂಕಿನ ಗೊರವನಹಳ್ಳಿಗೆ ಸೇರಿದ ಅಶೋಕ್ ಮತ್ತು ವಾಣಿ ದಂಪತಿ, ತಮ್ಮ ಮಗಳು ಹೃತೀಕ್ಷಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಬೈಕ್ ಅನ್ನು

ವಾಹನ ತಪಾಸಣೆ ವೇಳೆ ಅಪಘಾತ : ಮೂರು ವರ್ಷದ ಬಾಲಕಿ ಸಾವು – ಮೂವರು ಎಎಸ್‌ಐಗಳು ಸಸ್ಪೆಂಡ್ Read More »

ಹೆಬ್ರಿ : ಪಾದಾಚಾರಿ ಮಹಿಳೆಗೆ ಸ್ಕೂಟರ್‌ ಡಿಕ್ಕಿ

ಕಾರ್ಕಳ : ಸ್ಕೂಟರ್‌ ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಗಾಯಗೊಂಡಿರುವ ಘಟನೆ ಮೇ 18ರಂದು ಶಿವಪುರದಲ್ಲಿ ಸಂಭವಿಸಿದೆ. ಲಕ್ಷ್ಮೀ (60 ವ) ಎಂಬವರು ಮೇ 18ರಂದು ರಾತ್ರಿ 11:30ಕ್ಕೆ ಬ್ಯಾಣ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನದ ಹತ್ತಿರ ರಸ್ತೆ ದಾಟುವಾಗ ಮಧನ್‌ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಲಕ್ಷ್ಮೀ ಅವರ ತಲೆಯ ಹಿಂಭಾಗ, ಎಡಗೈ ಹಾಗೂ ಎಡಕಾಲಿಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೆಬ್ರಿ : ಪಾದಾಚಾರಿ ಮಹಿಳೆಗೆ ಸ್ಕೂಟರ್‌ ಡಿಕ್ಕಿ Read More »

error: Content is protected !!
Scroll to Top