• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ಕಾರು ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಆಸ್ಪತ್ರೆ ದಾಖಲಾದ ಘಟನೆ ಸೆ. 16ರಂದು ನೀರೆ ಗ್ರಾಮದಲ್ಲಿ ಸಂಭವಿಸಿದೆ. ಬೊಗ್ಗು ಎಂಬವರು ನೀರೆ ಗ್ರಾಮದ ಪಳ್ಳಿ ಕ್ರಾಸ್‌ನಲ್ಲಿ ಬೈಲೂರು ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಲೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಬೊಗ್ಗು ಅವರು ಗಾಯಗೊಂಡಿದ್ದು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯರು ಹಾಗೂ ಗುದ್ದಿದ ಕಾರಿನ ಚಾಲಕ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ

ಕಾರು ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು Read More »

ರಸ್ತೆ ಗುಂಡಿಗೆ ಬಿದ್ದ ಸ್ಕೂಟಿ – ಕ್ಯಾಂಟರ್ ಲಾರಿ ಹರಿದು ಸವಾರೆ ಸಾವು

ಮಂಗಳೂರು : ರಸ್ತೆ ಗುಂಡಿಗೆ ಬಿದ್ದ ಸ್ಕೂಟಿ ಸವಾರೆ ಮೇಲೆ ಕ್ಯಾಂಟರ್ ಲಾರಿ ಹರಿದು, ಮಹಿಳೆ ಮೃತಪಟ್ಟಿರುವ ದುರ್ಘಟನೆ ಮಂಗಳೂರು ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗ ನಡೆದಿದೆ.ಉಡುಪಿಯ ಪರ್ಕಳ ಮೂಲದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ಸ್ಕೂಟಿಯಲ್ಲಿ‌ ಆಗಮಿಸುತ್ತಿದ್ದರು. ಸ್ಕೂಟಿ ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆ ಗುಂಡಿಗೆ ಬಿದ್ದ ಸ್ಕೂಟಿ – ಕ್ಯಾಂಟರ್ ಲಾರಿ ಹರಿದು ಸವಾರೆ ಸಾವು Read More »

ಕಾರಿಗೆ ಪಿಕಪ್‌ ಡಿಕ್ಕಿ – ಮಹಿಳೆಗೆ ಗಾಯ

ಹೆಬ್ರಿ : ಕಾರಿಗೆ ಪಿಕಪ್‌ ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿದ್ದ ಮಹಿಳೆ ಗಾಯಗೊಂಡಿರುವ ಘಟನೆ ಆ. 29ರಂದು ನಾಡ್ಪಾಲು ಗ್ರಾಮದ ಆಗುಂಬೆ ತಿರುವಿನಲ್ಲಿ ಸಂಭವಿಸಿದೆ. ಶಿವಮೊಗ್ಗದ ಪ್ರಸನ್ನ ಅವರು ಕಾರಿನಲ್ಲಿ ತನ್ನ ತಾಯಿ ಪುಷ್ಪಾ ಮತ್ತು ತಂಗಿ ಲತಾ ಅವರನ್ನು ಕರೆದುಕೊಂಡು ಮಣಿಪಾಲ ಆಸ್ಪತ್ರೆಗೆ ಬಂದು ವಾಪಾಸು ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಆಗುಂಬೆ ತಿರಿವಿನಲ್ಲಿ ಎದುರಿನಿಂದ ಬಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪುಷ್ಪಾ ಅವರ ತಲೆಗೆ ಗಾಯವಾಗಿದೆ. ಈ ಬಗ್ಗೆ ಹೆಬ್ರಿ

ಕಾರಿಗೆ ಪಿಕಪ್‌ ಡಿಕ್ಕಿ – ಮಹಿಳೆಗೆ ಗಾಯ Read More »

ರಿಕ್ಷಾ ಬೈಕ್‌ ಅಪಘಾತ- ಯುವಕ ಸಾವು

ಕಾರ್ಕಳ : ಬೈಪಾಸ್‌ ರಸ್ತೆಯಲ್ಲಿ ಆಟೋ ರಿಕ್ಷಾ ಹಾಗೂ ಬೈಕ್‌ ಮಧ್ಯೆ ಅಪಘಾತ ಸಂಭವಿಸಿದ್ದು ಆಟೋ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಆ. 14ರ ಬೆಳಿಗ್ಗೆ ಸಂಭವಿಸಿದೆ. ತೆಳ್ಳಾರು ನಿವಾಸಿ ರವಿ ಮೂಲ್ಯ (37) ಮೃತಪಟ್ಟ ದುರ್ದೈವಿ. ಅವಿವಾಹಿತರಾಗಿದ್ದ ರವಿ ಅವರು ಕಳೆದ ಕೆಲ ವರ್ಷಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಮೃತರು ತಂದೆ, ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ರಿಕ್ಷಾ ಬೈಕ್‌ ಅಪಘಾತ- ಯುವಕ ಸಾವು Read More »

ಸಂಪರ್ಕ ರಸ್ತೆ ನಾಶ – ಸರಕಾರದಿಂದ ಮಂಜೂರುಗೊಂಡ ಜಾಗದ ಬಳಕೆಗೆ ಅಡ್ಡಿ – ಜೀವ ಬೆದರಿಕೆ : ಪ್ರಕರಣ ದಾಖಲು

ಹೆಬ್ರಿ : ಸಂಪರ್ಕ ರಸ್ತೆಯನ್ನು ನಾಶ ಮಾಡಿ ಸರಕಾರದಿಂದ ಮಂಜೂರಾದ ಮತ್ತು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಜಾಗವನ್ನು ಉಪಯೋಗಿಸಿದಂತೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಿ ಎಂಬವರು ಶಿವಪುರ ಗ್ರಾಮದ ದೋರಿಯಲು ಎಂಬಲ್ಲಿಯ ಸರ್ವೆ ನಂಬರ-293/5ಪಿ1 ರಲ್ಲಿ 0.05 ಎಕರೆ ಸರಕಾರಿ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದು, ಈ ಜಾಗವು ಅವರಿಗೆ ನಿವೇಶನ ಹಕ್ಕಿನಡಿ ಮಂಜೂರಾಗಿರುತ್ತದೆ. ಈ ಜಾಗಕ್ಕೆ ಹೊಂದಿಕೊಂಡಿರುವ ಅಂದಾಜು 02.50 ಎಕ್ರೆ ಸರಕಾರಿ ಜಾಗ ಸಹ

ಸಂಪರ್ಕ ರಸ್ತೆ ನಾಶ – ಸರಕಾರದಿಂದ ಮಂಜೂರುಗೊಂಡ ಜಾಗದ ಬಳಕೆಗೆ ಅಡ್ಡಿ – ಜೀವ ಬೆದರಿಕೆ : ಪ್ರಕರಣ ದಾಖಲು Read More »

ಗುಂಡಿಗೆ ಬಿದ್ದ ಸ್ಕೂಟರ್‌ – ಸಹಸವಾರೆ ಆಸ್ಪತ್ರೆ ದಾಖಲು

ಕಾರ್ಕಳ : ಸ್ಕೂಟರ್‌ ಗುಂಡಿಗೆ ಬಿದ್ದ ಪರಿಣಾಮವಾಗಿ ಸಹಸವಾರೆ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಆ. 3ರಂದು ನೀರೆ ಗ್ರಾಮದಲ್ಲಿ ಸಂಭವಿಸಿದೆ.ಉಷಾ ಅವರನ್ನು ಅವರ ಪತಿ ಸ್ಕೂಟರಿನಲ್ಲಿ ಕುಳ್ಳಿರಿಸಿಕೊಂಡು ಉಡುಪಿ ಅಂಬಲಪಾಡಿ ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಿರುವಾಗ ರಾತ್ರಿ 7:30ಕ್ಕೆ ನೀರೆ ಗ್ರಾಮದ ನೀರೆಜೆಡ್ಡು ಎಂಬಲ್ಲಿ ಸ್ಕೂಟರ್‌ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದೆ. ಪರಿಣಾಮವಾಗಿ ಹಿಂಬದಿ ಕುಳಿತ್ತಿದ್ದ ಉಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಗಾಗಿ

ಗುಂಡಿಗೆ ಬಿದ್ದ ಸ್ಕೂಟರ್‌ – ಸಹಸವಾರೆ ಆಸ್ಪತ್ರೆ ದಾಖಲು Read More »

ನಿಂತ ಲಾರಿಗೆ ಬಸ್ ಡಿಕ್ಕಿ ; ಸ್ಥಳದಲ್ಲೇ ಇಬ್ಬರ ದುರ್ಮರಣ – 13 ಮಂದಿಗೆ ಗಾಯ

ಶಿವಮೊಗ್ಗ : ಹಾಳಾಗಿ ನಿಂತಿದ್ದ ಲಾರಿಗೆ ಹಿಂದಿನಿಂದ ದುರ್ಗಾಂಬ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಗಾಜನೂರು ಅಗ್ರಹಾರ ಬಳಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಈ ಅಪಘಾತ ನಡೆದಿದೆ. ಬಸ್ ಮಂಗಳೂರಿನಿಂದ ರಾತ್ರಿ ಹೊರಟಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ತಲುಪಬೇಕಿತ್ತು. ಅಪಘಾತದಲ್ಲಿ ಬಸ್ಸಿನ ನಿರ್ವಾಹಕ, ಹೊಸನಗರದ ಅಣ್ಣಪ್ಪ (38) ಹಾಗೂ ಪ್ರಯಾಣಿಕ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹರ್ಷಿತ್ (25) ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ. ಅಣ್ಣಪ್ಪ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು

ನಿಂತ ಲಾರಿಗೆ ಬಸ್ ಡಿಕ್ಕಿ ; ಸ್ಥಳದಲ್ಲೇ ಇಬ್ಬರ ದುರ್ಮರಣ – 13 ಮಂದಿಗೆ ಗಾಯ Read More »

ಬೈಕ್‌ಗೆ ರಿಕ್ಷಾ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ರಿಕ್ಷಾ ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಜು. 14ರಂದು ಮಿಯ್ಯಾರಿನಲ್ಲಿ ನಡೆದಿದೆ. ಮುಡಾರು ಗ್ರಾಮದ ಸ್ವಸ್ತಿಕ್‌ ಬೈಕ್‌ನಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಮಿಯ್ಯಾರು ಕುಂಟಿಬೈಲು ಜಂಕ್ಷನ್‌ಲ್ಲಿ ಮುಂದುಗಡೆ ಸಾಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಬಲಕ್ಕೆ ತಿರುಗಿಸಿದ ಪರಿಣಾಮ ಸ್ವಸ್ತಿಕ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ವಸ್ತಿಕ್‌ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಬೈಕ್‌ಗೆ ರಿಕ್ಷಾ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು Read More »

ಬೈಕ್‌ಗೆ ಕಾರು ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಜೂ. 23ರಂದು ಶಿವತಿಕೆರೆಯಲ್ಲಿ ಸಂಭವಿಸಿದೆ. ಕಸಬಾ ಗ್ರಾಮದ ಸನತ್‌ ಕುಮಾರ್ ಬೈಕ್‌ನಲ್ಲಿ ಕುಂಟಲ್ಪಾಡಿ ಜಂಕ್ಷನ್ ಕಡೆಯಿಂದ ಬೈಪಾಸ್‌ ಮಾರ್ಗವಾಗಿ ಶಿವತಿಕೆರೆ ಕಡೆಗೆ ಹೊರಟು ಶಿವತಿಕೆರೆಯಲ್ಲಿ ಯೂಟರ್ನ್ ಮಾಡುತ್ತಿರುವಾಗ ಕಾರ್ಕಳ ಕಡೆಯಿಂದ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸನತ್‌ ಕುಮಾರ್‌ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ

ಬೈಕ್‌ಗೆ ಕಾರು ಡಿಕ್ಕಿ – ಸವಾರ ಆಸ್ಪತ್ರೆ ದಾಖಲು Read More »

ದೂಪದಕಟ್ಟೆಯಲ್ಲಿ ಬಸ್‌ – ಕಾರು ಡಿಕ್ಕಿ

ಕಾರ್ಕಳ : ನಿಟ್ಟೆ ಗ್ರಾಮದ ದೂಪದಕಟ್ಟೆಯಲ್ಲಿ ಜೂ. 24ರಂದು ಖಾಸಗಿ ಬಸ್‌ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ.ಬಸ್‌ ಮಂಗಳೂರಿನಿಂದ ಕಾರ್ಕಳದೆಡೆಗೆ ಸಾಗುತ್ತಿದ್ದು, ಕಾರು ಅತ್ತೂರು ಚರ್ಚ್‌ ದ್ವಾರದಿಂದ ದೂಪದಕಟ್ಟೆ ರಸ್ತೆಯೆಡೆಗೆ ಹೋಗುತ್ತಿತ್ತು. ಡಿಕ್ಕಿಯ ಪರಿಣಾಮವಾಗಿ ಬಸ್‌ ಮತ್ತು ಕಾರಿನ ಮುಂಭಾಗ ಸ್ವಲ್ಪ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ಅಪಘಾತದಿಂದಾಗಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತದ ದೃಶ್ಯ ಹಿಂದಿನ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೂಪದಕಟ್ಟೆಯಲ್ಲಿ ಬಸ್‌ – ಕಾರು ಡಿಕ್ಕಿ Read More »

error: Content is protected !!
Scroll to Top