• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ನಿಟ್ಟೆ : ಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ – ಇಬ್ಬರು ಕಾರ್ಮಿಕರ ದುರ್ಮರಣ

ಕಾರ್ಕಳ : ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಿಟ್ಟೆ ಭ್ರಾಮರಿ ಕ್ರಾಸ್ ನಲ್ಲಿ ಮೇ 18ರ ಸಂಜೆ ಸಂಭವಿಸಿದೆ. ನಿಟ್ಟೆ ಗ್ರಾಮದ ದೂಪದಕಟ್ಟೆ ಮರಿಪರಪುವಿನಿಂದ ಕಲ್ಲು ಲೋಡ್ ಮಾಡಿ ಮಂಗಳೂರು ಹೊರಡುವಾಗ ಲಾರಿ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದೆ. ಪರಿಣಾಮ ಕೊಪ್ಪಳ ಜಿಲ್ಲೆ ಎಲಬುರ್ಗಿ ದೇವಾಳಪುರದ ಕರಿಯಪ್ಪ (22) ಮತ್ತು ನರಿಯಪ್ಪ (27) ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಟ್ಟೆ : ಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ – ಇಬ್ಬರು ಕಾರ್ಮಿಕರ ದುರ್ಮರಣ Read More »

ಹೆಬ್ರಿ : ಹೃದಯಘಾತದಿಂದ ಕಾರ್ಮಿಕ ಸಾವು

ಹೆಬ್ರಿ : ಹೃದಯಘಾತದಿಂದ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಮೇ 16ರಂದು ಶಿವಪುರದಲ್ಲಿ ಸಂಭವಿಸಿದೆ. ಹರಿಖಂಡಿಗೆ ಸಾಂತ್ಯಾರು ಗ್ರಾಮದ ಸತೀಶ್ (45) ಮೃತದುರ್ದೈವಿ. ಇವರು ಶಿವಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ಸುಂದರ ಹೆಗ್ಡೆಯವರಿಗೆ ಸೇರಿದ ಬಾವಿಯ ಕೆಲಸಕ್ಕೆ ಹೋದವರು, ಕೆಲಸ ಮಾಡುತ್ತಿದ್ದ ವೇಳೆ ಅಂಗಳದಲ್ಲಿ ಹೃದಯಘಾತದಿಂದ ಕುಸಿದು ಬಿದ್ದಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಅಸ್ಪತ್ರೆಗೆ 108 ವಾಹನದಲ್ಲಿ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೆಬ್ರಿ : ಹೃದಯಘಾತದಿಂದ ಕಾರ್ಮಿಕ ಸಾವು Read More »

ಟಿಪ್ಪರ್‌ಗೆ – ಬೈಕ್‌ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ : ಬೈಕ್‌ ಅಪಘಾತಕ್ಕೀಡಾಗಿ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡಿರುವ ಘಟನೆ ಮೇ 14ರಂದು ಬೋಳ ಗ್ರಾಮದಲ್ಲಿ ಸಂಭವಿಸಿದೆ.ಬೋಳ ಗ್ರಾಮದ ಶ್ರೀ ವೀರಮಾರುತಿ ದೇವಸ್ಥಾನದ ಬಳಿ ಹಾದುಹೋಗಿರುವ ಮಂಜರಪಲ್ಕೆ-ಸಚ್ಚರಿಪೇಟೆ ಡಾಮಾರು ರಸ್ತೆಯ ಇಳಿಜಾರಿನ ತಿರುವಿನಲ್ಲಿ ಪ್ರಶಾಂತ್ ಎಂಬವರು ತಮ್ಮ ಬೈಕ್‌ ಅನ್ನು ಸಚ್ಚರಿಪೇಟೆ ಕಡೆಯಿಂದ ಮಂಜರಪಲ್ಕೆ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು, ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ಬಿದ್ದು ರಸ್ತೆಯಲ್ಲಿ ಜಾರಿಕೊಂಡು ಎದುರಿನಿಂದ ಜರಪಲ್ಕೆ ಕಡೆಯಿಂದ ಸಚ್ಚರಿಪೇಟೆ ಕಡೆಗೆ ಮಣಿಕಂಠ

ಟಿಪ್ಪರ್‌ಗೆ – ಬೈಕ್‌ ಡಿಕ್ಕಿ : ಸವಾರನಿಗೆ ಗಾಯ Read More »

ಬಸ್‌ – ಬೈಕ್‌ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು

ಪುತ್ತೂರು : ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಪುತ್ತೂರು ಪುರುಷರಕಟ್ಟೆ ಎಂಬಲ್ಲಿ ಸಂಭವಿಸಿದೆ. ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (24) ಮೃತ ದುರ್ದೈವಿ. ಪುತ್ತೂರು ಕಡೆಯಿಂದ ಪುರುಷರಕಟ್ಟೆ ಕಡೆಗೆ ಸಾಗುತ್ತಿದ್ದ ಬೈಕ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಸರ್ವೀಸ್‌ಗೆ ಇಟ್ಟಿದ್ದ ಬೈಕ್‌ ವಾಪಾಸು ತರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬಸ್‌ – ಬೈಕ್‌ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು Read More »

ಮುನಿಯಾಲು : ಬೈಕ್‌ ಡಿಕ್ಕಿ – ಸವಾರ ಸಾವು

ಹೆಬ್ರಿ : ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವರಾ ಸಾವನಪ್ಪಿದ ಘಟನೆ ಮುನಿಯಾಲಿನಲ್ಲಿ ಮೇ 12ರಂದು ಸಂಭವಿಸಿದೆ. ಭಾಸ್ಕರ (52) ಎಂಬವರು ಮೃತ ದುರ್ದೈವಿ. ಇವರು ತನ್ನ ಬೈಕ್‌ನಲ್ಲಿ ಮುದ್ರಾಡಿ ಕಡೆಯಿಂದ ಮುನಿಯಾಲು ಕಡೆಗೆ ಹೋಗುತ್ತಿರುವಾಗ ಮುನಿಯಾಲು ಕಾಲೇಜ್ ಮುಂಭಾಗದಲ್ಲಿ ಮುನಿಯಾಲು ಕಡೆಯಿಂದ ಮುದ್ರಾಡಿ ಕಡೆಗೆ ಸಂದೀಪ್‌ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಭಾಸ್ಕರ್‌ ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿದ ವೈದ್ಯರು

ಮುನಿಯಾಲು : ಬೈಕ್‌ ಡಿಕ್ಕಿ – ಸವಾರ ಸಾವು Read More »

ಭೀಕರ ಕಾರು ಅಪಘಾತ : ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ಮೃತ್ಯು

ಆಂಧ್ರಪ್ರದೇಶ : ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಪವಿತ್ರಾ ಜಯರಾಂ (35) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯದವರಾಗಿದ್ದ ಪವಿತ್ರಾ, ತೆಲುಗಿನ ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಕರ್ನಾಟಕ ಮೂಲದ ನಟಿ ಪವಿತ್ರಾ ಜಯರಾಂ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಕನ್ನಡದ ರೋಬೋ ಫ್ಯಾಮಿಲಿ ಹಾಸ್ಯ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಪವಿತ್ರಾ ಜಯರಾಂ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಪವಿತ್ರಾ ತೆಲುಗು ಪ್ರೇಕ್ಷಕರಿಗೂ ಸಹ ಬಹಳ ಹತ್ತಿರವಾಗಿದ್ದರು. ನಟಿ ಪವಿತ್ರಾ ಅವರು

ಭೀಕರ ಕಾರು ಅಪಘಾತ : ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ಮೃತ್ಯು Read More »

ಕಾರ್ಕಳದ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ – ಇಬ್ಬರು ಮಹಿಳೆಯರಿಗೆ ಗಾಯ

ಕಾರ್ಕಳ : ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಮೇ 8ರಂದು ಕಾರ್ಕಳದ ಬಂಗ್ಲೆಗುಡ್ಡೆಯ ಕಜೆ ಎಂಬಲ್ಲಿ ನಡೆದಿದೆ. ಕಜೆಯ ಮನೆಯೊಂದರಲ್ಲಿ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು, ಸುಡುಮದ್ದು ತಯಾರಿಕೆ ವೇಳೆ ಅವಘಡ ಸಂಭವಿಸಿದೆ. ಪರಿಣಾಮ ಇಬ್ಬರು ಕಾರ್ಮಿಕ ಮಹಿಳೆಯರು ಗಾಯಗೊಂಡಿದ್ದಾರೆ. ಕಟ್ಟಡ ಹಾನಿಗೀಡಾಗಿದೆ. ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಓರ್ವ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಖಾದರ್‌ ಎಂಬವರಿಗೆ ಸೇರಿದ ಘಟಕ ಇದಾಗಿದ್ದು, ಸ್ಥಳಕ್ಕೆ

ಕಾರ್ಕಳದ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ – ಇಬ್ಬರು ಮಹಿಳೆಯರಿಗೆ ಗಾಯ Read More »

ರಿಕ್ಷಾ ಡಿಕ್ಕಿ – ಬೈಕ್‌ ಸವಾರರಿಗೆ ಗಾಯ

ಕಾರ್ಕಳ : ಬೈಕ್‌ಗೆ ಆಟೋರಿಕ್ಷಾ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಮೇ 6ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಲೆಮಿನಾ-ಬೋರ್ಗಲ್ ಗುಡ್ಡೆ ರಸ್ತೆಯಲ್ಲಿ ಆಟೋರಿಕ್ಷಾವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಲೆಮಿನಾ ಕಡೆಯಿಂದ ಬೋರ್ಗಲ್ ಗುಡ್ಡೆ ಕಡೆಗೆ ರಾಘವೇಂದ್ರ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಬೈಕ್ ಸವಾರ ರಾಘವೇಂದ್ರ ಮತ್ತು ಸಹಸವಾರ ಅವರ ಮಗ ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳು ಕಾರ್ಕಳ

ರಿಕ್ಷಾ ಡಿಕ್ಕಿ – ಬೈಕ್‌ ಸವಾರರಿಗೆ ಗಾಯ Read More »

ಸ್ಕೂಟರ್‌ಗೆ ಕಾರು ಡಿಕ್ಕಿ – ಶಿಕ್ಷಕಿಗೆ ಗಾಯ

ಕಾರ್ಕಳ : ಶಿಕ್ಷಕಿಯೋರ್ವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಶಿಕ್ಷಕಿ ಗಾಯಗೊಂಡ ಘಟನೆ ಮೇ 6ರಂದು ಅಯ್ಯಪ್ಪನಗರದಲ್ಲಿ ಸಂಭವಿಸಿದೆ. ಜೆಸಿಸ್ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ಶಿಲ್ಪಾ ಗಾಯಗೊಂಡವರು. ಇವರು ಕರ್ತವ್ಯ ಮುಗಿಸಿ ಕುಕ್ಕುಂದೂರು ದೇವಿಕೃಪಾ ಸಭಾಭವನಕ್ಕೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಅಯ್ಯಪ್ಪನಗರದ ಬಳಿ ಜೋಡುರಸ್ತೆಯಿಂದ ಬೈಲೂರು ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಶಿಲ್ಪಾ ಅವರು ಗಾಯಗೊಂಡಿದ್ದು ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ

ಸ್ಕೂಟರ್‌ಗೆ ಕಾರು ಡಿಕ್ಕಿ – ಶಿಕ್ಷಕಿಗೆ ಗಾಯ Read More »

ನಿಟ್ಟೆ : ಬೈಕ್‌ ಡಿಕ್ಕಿ – ಪಾದಚಾರಿಗಳಿಗೆ ಗಾಯ

ಕಾರ್ಕಳ : ಬೈಕ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಪಾದಚಾರಿಗಳು ಗಾಯಗೊಂಡ ಘಟನೆ ನಿಟ್ಟೆ ಗ್ರಾಮದಲ್ಲಿ ಏ. 11ರಂದು ರಾತ್ರಿ ಸಂಭವಿಸಿದೆ. ನಿಟ್ಟೆ ಮಸೀದಿ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ನಿಟ್ಟೆ ಕಡೆಯಿಂದ ಮಾವಿನಕಟ್ಟೆ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯ ಹಾಗೂ ಅವರ ಸ್ನೇಹಿತ ಬಾಲಕೃಷ್ಣ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಳನ್ನು ಕಾರ್ಕಳ ಸಿ.ಟಿ.

ನಿಟ್ಟೆ : ಬೈಕ್‌ ಡಿಕ್ಕಿ – ಪಾದಚಾರಿಗಳಿಗೆ ಗಾಯ Read More »

error: Content is protected !!
Scroll to Top